ಸಕ್ಕರೆಮಟ್ಟ ಅಳೆಯಲು ಈಗ ಚುಚ್ಚಬೇಕಿಲ್ಲ!
– ವಿವೇಕ್ ಶಂಕರ್.
ನಮ್ಮೆಲ್ಲರಿಗೂ ಗೊತ್ತು ಸಕ್ಕರೆ ಬೇನೆಯಿಂದ ಬಳಲುತ್ತಿರುವ ಬೇನಿಗರು (patient) ತಮ್ಮ ಸಕ್ಕರೆ ಮಟ್ಟವನ್ನು ಅಳೆಯುವುದಕ್ಕೆ ಬೆರಳನ್ನು ಚುಚ್ಚಬೇಕೆಂದು. ಆದರೆ ಗೂಗಲ್ ಅವರ ಹೊಸ ಬೆಳವಣಿಗೆಯಿಂದ ಬೆರಳನ್ನು ಚುಚ್ಚಿ ನೆತ್ತರನ್ನು ಉಪಯೋಗಿಸಿ ತಮ್ಮ ಸಕ್ಕರೆಮಟ್ಟವನ್ನು ಅಳೆಯುವ ಕೆಲಸ ನಿಲ್ಲಬಹುದೆಂದು ಹೊಸ ನಂಬಿಕೆ ಮೂಡಿದೆ. ಇದೇನು ಗೂಗಲ್ಲಿನ ಹೊಸ ಕಂಡುಹಿಡಿಯುವಿಕೆ ಅನ್ನುವಿರಾ?
ಇದೊಂದು ಹೊಸ ಬಗೆಯ ತಾಕು ಸೇರ‍್ಗನ್ನಡಿ (contact lens), ಇದರಲ್ಲಿ ಒಂದು ಕಂಬಿಯಿಲ್ಲದ ಚಿಪ್ಪಿನ (wireless chip) ಜೊತೆ ತಾಕು ಸೇರ‍್ಗನ್ನಡಿಯೊಳಗೆ ಎರಡು ಪದರಗಳ ನಡುವೆ ಒಂದು ಸಣ್ಣದಾದ ಸೀವುಳಿ-ಸಕ್ಕರೆಯ ಅರಿವುಗೆಯೂ (glucose sensor) ಒಳಸೇರಿಸಲಾಗಿರುತ್ತದೆ.
ಈ ಸೇರ‍್ಗನ್ನಡಿಯು ಕಂಬನಿಗಳನ್ನು ಬಳಸಿ ಸಕ್ಕರಮಟ್ಟವನ್ನು ಅಳತೆ ಮಾಡುತ್ತದೆ. ಈಗ ಮಾಡಿರುವ ಸೇರ‍್ಗನ್ನಡಿ ಚಣಕ್ಕೆ ಒಂದು ಅಳತೆಯನ್ನು ಕೊಡುತ್ತದೆ. ಈ ಸುದ್ದಿ ಕೇಳುವುದಕ್ಕೆ ತುಂಬ ಚೆಂದ ಆದರೆ ಇದನ್ನು ಬಳಕೆಯ ಮಟ್ಟಕ್ಕೆ ಬರುವುದಕ್ಕೆ ಇನ್ನೂ ಕೆಲಸ ಆಗಬೇಕಾಗಿದೆಂದು ಗೂಗಲ್ ಹೇಳಿದೆ.
ಇದರ ಸಲುವಾಗಿ ಡಿಸೆಂಬರಲ್ಲಿ ಗೂಗಲ್ ಕೂಟದ ನಾಲ್ವರು ಅಮೇರಿಕಾ ಆಳ್ವಿಕೆಯ ಎಪ್.ಡಿ.ಯ. (FDA) ಕವಲನ್ನು ಬೇಟಿ ಮಾಡಿದ್ದಾರೆ. ಒಟ್ಟಿನಲ್ಲಿ ಸಕ್ಕರಬೇನೆಯಿಂದ ಬಳಲುತ್ತಿರುವ ಮಂದಿಗೆ ತಮ್ಮ ಸಕ್ಕರೆಮಟ್ಟವನ್ನು ಸುಳುವಾಗಿ ಅಳೆಯಬಹುದೆಂಬ ಒಸಗೆ ಒಂದು ಕಡೆ ನಲಿವನ್ನು ತರುವುದರಲ್ಲಿ ಎರಡು ಮಾತಿಲ್ಲ. ಈ ಹೊಸ ಬೆಳವಣಿಗೆ ಬೇಗನೆ ನನಸಾಗಲೆಂದು ಹಾರಯ್ಸೋಣ.
(ಒಸಗೆಯ ಹಾಗೂ ತಿಟ್ಟದ ಸೆಲೆ: blogs.wsj.com, vr-zone.com)
ಇತ್ತೀಚಿನ ಅನಿಸಿಕೆಗಳು