ಕಸವನ್ನು ಎತ್ತುವ ನೀರ‍್ಗಾಲಿ
– ವಿವೇಕ್ ಶಂಕರ್.
ನಮಗೆಲ್ಲ ಗೊತ್ತಿರುವಂತೆ ಹಲವು ಕೆರೆಗಳಲ್ಲಿ ಇಲ್ಲವೇ ರೇವುಗಳಲ್ಲಿ (harbour) ನೀರಿನ ಮೇಲ್ಮಯ್ಯಲ್ಲಿ ಕಸ ತೇಲಾಡುತ್ತಿರುತ್ತದೆ. ಇದು ತುಂಬಾ ತೊಂದರೆಯನ್ನು ನೀಡುತ್ತದೆ ಮತ್ತು ಇದನ್ನು ತೆಗೆಯುವುದು ತುಂಬಾ ಸಿಕ್ಕಲಾದ ಕೆಲಸ.
ಆದರೆ ಇತ್ತೀಚೆಗೆ ಬಾಲ್ಟಿಮೋರಿನ ಒಳ ರೇವಿನಲ್ಲಿ ಈ ಕೆಲಸ ಸುಳುವಾಗಿಸಲು ಒಂದು ನೀರ‍್ಗಾಲಿಯನ್ನು ಬಳಸಲು ತೀರ‍್ಮಾನಿಸಿದ್ದಾರೆ. ಈ ನೀರ‍್ಗಾಲಿಯೂ ನೀರಿನ ಹರಿವು ಮತ್ತು ನೇಸರದ ಕಸುವಿನ ಮೇಲೆ ಓಡುತ್ತದೆ.
ಮೇಲಿನ ತಿಟ್ಟದಲ್ಲಿ ನೀರ‍್ಗಾಲಿಯ ಬಾಗಗಳು ಕಾಣುತ್ತವೆ. ಅವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ,
A – ನೀರ‍್ಗಾಲಿಯ ತೊಲೆಯು (boom) ಕಸವನ್ನು ಒಯ್ಯುಕಕ್ಕೆ ಕಳುಹಿಸುತ್ತದೆ.
B – ಕುಂಟೆ ಏರ‍್ಪಾಟು (rake system) ಕಸವನ್ನು ಮುರಿದು ಸಣ್ಣದಾಗಿ ಮಾಡುತ್ತದೆ.
C – ಒಯ್ಯುಕದ ಪಟ್ಟಿ (conveyor belt) ಕಸವನ್ನು ಕಸದತೊಟ್ಟಿಗೆ ಕಳುಹಿಸುತ್ತದೆ.
D – ಕಸದತೊಟ್ಟಿಯು (dumpster) ಕಸವನ್ನು ಕೂಡಿಡುತ್ತದೆ, ಈ ಕಸವನ್ನು ಆಮೇಲೆ ಬೇರೆಡೆ ಸಾಗಿಸಲಾಗುತ್ತದೆ.
E – ಗಾಲಿಯು ಒಯ್ಯುಕದ ಪಟ್ಟಿಯನ್ನು ತಿರುಗಿಸುತ್ತದೆ.
F – ನೇಸರ ಪಟ್ಟಿಯು (solar panel) ಬೇಕಾದ ಕಸುವನ್ನು ಒದಗಿಸುತ್ತದೆ.
ನೀರಿನಲ್ಲಿ ತೇಲಾಡುವ ಕಸದ ತೊಂದರೆಯನ್ನು ಬಗೆಹರಿಸಲು ನೇಸರ ಕಸುವಿನಿಂದ ನಡೆಯುವ ಈ ಸಲಕರಣೆಯನ್ನು ಎಲ್ಲೆಡೆ ಅಳವಡಿಸಿದರೆ ಒಳಿತಲ್ಲವೇ?
(ತಿಟ್ಟದ ಮತ್ತು ಒಸಗೆಯ ಸೆಲೆ: popsci)
ಇತ್ತೀಚಿನ ಅನಿಸಿಕೆಗಳು