ನಮ್ಮಂತೆ ಗಿಡಗಳೂ ಮಲಗುತ್ತವಾ?

 ವಿವೇಕ್ ಶಂಕರ್.

ನಮ್ಮೆಲ್ಲರಿಗೂ ಗೊತ್ತು ಮಲಗುವುದು ಬಾಳಿನ ಒಂದು ಅರಿದಾದ ಬಾಗವೆಂದು. ಉಸಿರಾಟದ ಹಾಗೆ ಹುಟ್ಟಿನಿಂದ ಕೊನೆಯುಸಿರಿರುವ ತನಕ ಮಲಗುವುದು ನಾಳು-ನಾಳಿನ ಕೆಲಸವೆಂದು. ಮಾನವರು ಮಲಗುತ್ತಾರೆ, ನಮ್ಮ ಸುತ್ತಮುತ್ತಲ ಹಕ್ಕಿಗಳು, ಪ್ರಾಣಿಗಳೂ ಮಲಗುತ್ತವೆ. ಹಾಗಾದರೆ ನಮ್ಮ ಮರ-ಗಿಡಗಳೂ ಮಲಗುತ್ತವಾ? ಮಲಗದಿದ್ದರೆ ಅವೇನು ಮಾಡುತ್ತವೆ? ಕೇಳ್ವಿಗಳಿಗೆ ಹೇಳ್ವಿಗಳನ್ನು ಹುಡುಕೋಣವೆ.

ಗಿಡಗಳ ಬಗ್ಗೆ ತಿಳಿವಿಗರು ಹೇಳುವುದೇನೆಂದರೆ ಗಿಡಗಳು ನಮ್ಮಂತೆ ಮಲಗುವುದಿಲ್ಲ. ಮಾನವರಲ್ಲಿರುವಂತಹ ನಡುವಣ ನರದ ಏರ‍್ಪಾಟು ಮಲಗುವುದನ್ನು ತೀರ‍್ಮಾನಿಸುತ್ತದೆ. ಆದರೆ ಈ ಏರ‍್ಪಾಟು ಗಿಡಗಳಲ್ಲಿಲ್ಲ. ಗಿಡಗಳಲ್ಲಿ ನಾಳುಸುತ್ತುವ ಮರುಕಳಿಕೆಗಳಿದ್ದು (circadian rhythms). ಈ  ಏರ‍್ಪಾಟಿಗೆ ಗಿಡಗಳು ಇಪ್ಪತ್ನಾಲ್ಕು ಗಂಟೆಯ ಬೆಳಕು-ಕತ್ತಲೆಯ ಸುತ್ತಿಗೆ ಹೊಂದಿಕೊಂಡಿರುತ್ತವೆ. ಗಿಡಗಳನ್ನು ದಿನವೆಲ್ಲ ಬೆಳಕಿನಲ್ಲಿ ಇಟ್ಟರೂ ಇದು ನಿಲ್ಲದೆ ನಡೆಯುತ್ತದೆ.

ನಾಳುಸುತ್ತುವ ತಿರುಗು (circadian cycle) ನಮ್ಮಲ್ಲಿ ಯಾವಾಗ ಮಲಗಬೇಕೆಂದು ಯಾವಾಗ ಏಳಬೇಕೆಂದು ತೀರ‍್ಮಾನಿಸುತ್ತದೆ. ಬೆಳಗ್ಗೆ ಎದ್ದ ಕೂಡಲೇ ನೇಸರನ ಕದಿರುಗಳು ನಮ್ಮ ಕಣ್ಣಿಗೆ ಬೀಳುತ್ತವೆ, ಮಿದುಳಿನ ಸೂಲುಗೂಡಗಳನ್ನು ಎಚ್ಚರಿಸುತ್ತವೆ, ಇವುಗಳಲ್ಲಿರುವ ಮೆಲ್ಟೋನಿನ್ ಎಂಬ ಸೋರುಗೆ (hormone) ಇದ್ದು, ಇದು ಮಾನವರಲ್ಲಿ ತೂಕಡಿಕೆಯನ್ನು ತೀರ‍್ಮಾನಿಸುತ್ತದೆ. ಮೆಲ್ಟೋನಿನ್ ಮಟ್ಟಕ್ಕೆ ತಕ್ಕ ಹಾಗೆ ತೂಕಡಿಕೆ ತೀರ‍್ಮಾನವಾಗುತ್ತದೆ. ಹೆಚ್ಚಿದ್ದರೆ ನಿದ್ದೆ ನಮ್ಮನ್ನು ಆವರಿಸಿದರೆ, ಕಡಿಮೆಯಾದರೆ ತೂಕಡಿಕೆ ಕಡಿಮೆಯಾಗುತ್ತದೆ. ಇರುಳಿನಲ್ಲಿ ಇದರ ಮಟ್ಟ ಹೆಚ್ಚಿದ್ದು ಹಗಲಲ್ಲಿ ಕಡಿಮೆ ಆಗುತ್ತದೆ. ಆದರೆ ಗಿಡಗಳಲ್ಲಿ ಇದರ ಕೆಲಸ ಬೇರೆಯೆಂದು ಮುಂದಕ್ಕೆ ತಿಳಿದುಕೊಳ್ಳೋಣ.

ಜಾನೆಟ್ ಬ್ರಾಮ್, ರಯ್ಸ್ ಕಲಿಕೆವೀಡಿನ ಗಿಡ ತಿಳಿವಿಗರು ಇದರ ಸಲುವಾಗಿ ತಮ್ಮ ತಿಳುವಳಿಕೆಗಳನ್ನು ಮುಂದಿಟ್ಟಿದ್ದಾರೆ. ಒಂದು ನಾಳಿನಲ್ಲಿ ಗಿಡಗಳಲ್ಲಿ ಉಸಿರಿಯರಿಮೆಯ ಮಾರ‍್ಪಾಟುಗಳು ನಡೆಯುತ್ತವೆ. ಈ ನಾಳುಸುತ್ತುವ ಮರುಕಳಿಕೆಯ ಕೆಲಸ ಒಂದು ಗಿಡಕ್ಕೆ ತುಂಬಾ ಅರಿದು ಹಾಗೂ ಇದರಿಂದ ತುಂಬಾ ಉಪಯೋಗಗಳಿವೆ. ಇದನ್ನು ಬಳಸಿ ಗಿಡಗಳು ಹಗಲಿನ ಅಳತೆಯನ್ನು ಮಾಡುತ್ತವೆ, ಅಮಗದ/ರುತು ಮಾರ‍್ಪಾಟಿನ (seasonal changes) ಮುನ್ನವೇ ಅಣಿಗೊಳ್ಳುವ ಕೆಲಸ ಕೂಡ ಇದರಿಂದಲೇ ನಡೆಯುತ್ತದೆಂದು ಜಾನೆಟ್ ಹೇಳಿದ್ದಾರೆ. ಗಿಡಗಳ ನಡವಳಿಕೆಯೂ ನೇಸರನ ಮೇಲೆ ನಿಂತಿದೆ. ನೇಸರನನ್ನು ಹಿಂಬಾಲಿಸುವುದರಿಂದ ಬೆಳಕಿನ ಕೂಡುಗೆಯ ಅಳವನ್ನು (photosynthesis potential) ಗಿಡಗಳು ಹೆಚ್ಚಿಸುತ್ತವೆ.

ಇದನ್ನು ಈ ಕೆಳಗಿನ ತಿಟ್ಟದಲ್ಲಿ ತೋರಿಸಲಾಗಿದೆ. ಒಂದು ನಾಳಿನಲ್ಲಿ ನೇಸರನ ಏರಿಳಿತಕ್ಕೂ ಈ ಗುರುಗುಲುವೂ ತೂಗಾಡುವುದಕ್ಕೂ ಹೊಂದಾಣಿಕೆಯಿದೆ.

http---makeagif.com--media-3-07-2014-Um1bLz

ಜಾನೆಟ್ ತಂಡದ ಅರಕೆಯಿಂದ ಇನ್ನೂ ಬೆರಗು ಮೂಡಿಸುವ ಒಸಗೆಯೊಂದು ಕೂಡ ತಿಳಿದುಬಂದಿದೆ. ನಮಗೆ ಗೊತ್ತಿರುವಂತೆ ಹಲವು ಹುಳಗಳು ಗಿಡಗಳನ್ನು ತಿನ್ನುತ್ತವೆ. ಎಲೆಕೋಸನ್ನು ತಿನ್ನುವ ಕಂಬಳಿಹುಳಗಳನ್ನು ಎದುರಾಡಲು, ಗಿಡಗಳು ತಮ್ಮ ನಾಳುಸುತ್ತುವ ಮರುಕಳಿಕೆಯ ನೆರವನ್ನು ಪಡೆದುಕೊಳ್ಳುತ್ತವಂತೆ. ಕಂಬಳಿಹುಳಗಳು ಯಾವಾಗ ಬರಬಹುದೆಂದು ಅರಿತುಕೊಳ್ಳುವ ಗಿಡಗಳು ಒಂದು ಕಟು ಇರ‍್ಪನ್ನು (chemical) ಹೊರಬಿಡುವುದರಿಂದ ಈ ಹುಳಗಳನ್ನು ಓಡಿಸಬಲ್ಲವಂತೆ.

ಇಲ್ಲಿ ನಾವು ಒಂದನ್ನು ಗಮನಿಸಬೇಕು, ಬೇರೆ ಉಸುರಿಗಳ ಹಾಗೆ ಗಿಡಗಳು ಊಟಕ್ಕಾಗಲಿ ಇಲ್ಲವೇ ತಮ್ಮನ್ನು ತಾವು ಕಾಪಾಡುವುದಕ್ಕೆ ಆಗಲಿ ಎಲ್ಲೂ ಹೋಗುವುದಕ್ಕೆ ಆಗುವುದಿಲ್ಲ. ಆದರೆ ಈ ನಾಳುಸುತ್ತುವ ಮರುಕಳಿಕೆಯ ನೆರವಿನಿಂದ ತಮ್ಮನ್ನ ತಾವು ಕಾಪಾಡಿಕೊಳ್ಳುತ್ತವೆ ಜೊತೆಗೆ ಕೂಳನ್ನು ಪಡೆಯುತ್ತವೆ.

ಗಿಡಗಳು ಚೆನ್ನಾಗಿ ಬೆಳೆದರೆ ತಾನೇ ನಮಗೆ ಕೂಳು ಸಿಗುವುದು. ಹಾಗದರೆ ರಯ್ತರ ಬೆಳೆಗೂ ಈ ನಾಳುಸುತ್ತುವ ಮರುಕಳಿಕೆಗೂ ನಂಟು ಇದಿಯಾ? ಇದರಿಂದ ಬೆಳೆ ಹೆಚ್ಚು ಮಾಡಬಹುದಾ? ಇದನ್ನು ಸರಿಯಾಗಿ ಅರಿತರೆ ಬೆಳೆಯನ್ನು ಹೆಚ್ಚಿಸಬಹುದೆಂದು ಹಲವು ತಿಳಿವಿಗರು ಹೇಳಿದ್ದಾರೆ. ಒಟ್ಟಿನಲ್ಲಿ ಗಿಡಗಳು ನಾವು ಮಲಗುವ ಹಾಗೆ ಮಲಗಿದ್ದರೂ ತಾವು ಬಾಳುವುದಕ್ಕೆ ಏನೇನು ಮಾಡಬೇಕು ಅವೆಲ್ಲ ಮಾಡುತ್ತವೆ ಎಂದು ನಾವು ಇಲ್ಲಿ ತಿಳಿಯಬಹುದು.

(ತಿಳಿವಿನ ಹಾಗೂ ತಿಟ್ಟದ ಸೆಲೆ: popsci.com 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: