ಕವಿತೆ: ಕಿರುಗವಿತೆಗಳು

– ನಿತಿನ್ ಗೌಡ.

ನಿನ್ನೊಲವ ಬಂದಿ

ಕಳೆದುಹೋಗಲಾರೆ ನಾ
ನಿನ್ನೊಲವ ಪರಿದಿ ಮೀರಿ;
ನೀಡು‌‌ ನೀ‌ ದೂರು ಬೇಕಾದರೆ;
ಹೆಚ್ಚೇನು‌ ಆಗಲಾರದು, ಹೇಗಿದ್ದರೂ;
ಈಗಾಗಲೇ ಆಗಿರುವೆ ನಾ ನಿನ್ನೊಲವ ಬಂದಿ.

******

ನೆಮ್ಮದಿಯ ಕದಿರು

ಎಲ್ಲವೂ ಸರಿಹೋಗಬಹುದು ಕೊನೆಗೆ ||೨||
ಸರಿಹೋಗದಿದ್ದಲ್ಲಿ ಅದು ಕೊನೆಯಲ್ಲವೇನೋ?
ಎಲ್ಲ‌ ಕದವು ಮುಚ್ಚಿದರೇನು;
ತೆರೆಯುವುದು ಕೊನೆಗೆ, ಇರುಳ ಒಡಲ ಸೀಳಿ;
ಒತ್ತಾಸೆಯ ಕಿಟಕಿಯು, ಮುಂಬೊತ್ತನು ತೋರಲು.
ಇಡು ನೀ ನಂಬಿಕೆಯ ನಿನ್ನಲಿ;
ಹೊರಹೊಮ್ಮುವುದು ಕೊನೆಗೆ ನೆಮ್ಮದಿಯ ಕದಿರು

******

ಸುಳ್ಳಲ್ಲವೇ

ಹೇಳಲು ಹೆಚ್ಚಿರುವಾಗ, ತುಟಿ ಬಿಚ್ಚದಿರುವುದೇ
ಬಗೆಯುವ ಸುಳ್ಳಲ್ಲವೇ?
ಮೌನಕೆ ಬಿಡುವಾದಾಗ, ಮಾತನಾಡದಿರುವುದೇ
ಬಗೆಯುವ ಸುಳ್ಳಲ್ಲವೇ?

(ಚಿತ್ರಸೆಲೆ: copilot.mocrosoft.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks