ಎಣಿಕೆ ಕ್ರಮ ಹೀಗಾದರೆ ಸರಿಯಲ್ಲವೇ?

ಎಂ.ಸಿ.ಕ್ರಿಶ್ಣೇಗವ್ಡ.

kannada-numbers

ಕೆಳಗಿನ ಎಣಿಕೆ ಕ್ರಮದ ಪಟ್ಟಿಯಲ್ಲಿ ದಪ್ಪ ಅಕ್ಶರಗಳಲ್ಲಿ ಬರೆದಿರುವ ಸಂಕ್ಯೆಗಳನ್ನು ಗಮನಿಸಿ,

ಉಲಿಯುತ್ತಿರುವ ರೀತಿ ಉಲಿಯ ಬೇಕಾಗಿರುವ ರೀತಿ
1 ಒಂದು ಒಂದು
2 ಎರಡು ಎರಡು
3 ಮೂರು ಮೂರು
4 ನಾಲ್ಕು ನಾಕು
5 ಅಯ್ದು ಅಯ್ದು
6 ಆರು ಆರು
7 ಏಳು ಏಳು
8 ಎಂಟು ಎಂಟು
9 ಒಂಬತ್ತು ಒಂಬು
10 ಹತ್ತು ಹತ್ತು

 

ಉಲಿಯುತ್ತಿರುವ ರೀತಿ ಉಲಿಯ ಬೇಕಾಗಿರುವ ರೀತಿ
11 ಹನ್ನೊಂದು ಹನ್ನೊಂದು
12 ಹನ್ನೆರಡು ಹನ್ನೆರಡು
13 ಹದಿಮೂರು ಹದಿಮೂರು
14 ಹದಿನಾಲ್ಕು ಹದಿನಾಕು
15 ಹದಿನಯ್ದು ಹದಿನಯ್ದು
16 ಹದಿನಾರು ಹದಿನಾರು
17 ಹದಿನೇಳು ಹದಿನೇಳು
18 ಹದಿನೆಂಟು ಹದಿನೆಂಟು
19 ಹತ್ತೊಂಬತ್ತು ಹದಿಒಂಬು
20 ಇಪ್ಪತ್ತು ಇಪ್ಪತ್ತು

 

ಉಲಿಯುತ್ತಿರುವ ರೀತಿ ಉಲಿಯ ಬೇಕಾಗಿರುವ ರೀತಿ
21 ಇಪ್ಪತ್ತೊಂದು ಇಪ್ಪತ್ತೊಂದು
22
23
24
25
26
27
28 ಇಪ್ಪತ್ತೆಂಟು ಇಪ್ಪತ್ತೆಂಟು
29 ಇಪ್ಪತ್ತೊಂಬತ್ತು ಇಪ್ಪತೊಂಬು
30 ಮುವತ್ತು ಮುವತ್ತು

 

ಉಲಿಯುತ್ತಿರುವ ರೀತಿ ಉಲಿಯ ಬೇಕಾಗಿರುವ ರೀತಿ
81 ಎಂಬತ್ತೊಂದು ಎಂಬತ್ತೊಂದು
82
83
84
85
86
87
88
89 ಎಂಬತೊಂಬತ್ತು ಎಂಬತೊಂಬು
90 ತೊಂಬತ್ತು ಒಂಬತ್ತು

 

ಉಲಿಯುತ್ತಿರುವ ರೀತಿ ಉಲಿಯ ಬೇಕಾಗಿರುವ ರೀತಿ
91 ತೊಂಬತೊಂದು ಒಂಬತೊಂದು
92 ತೊಂಬತ್ತೆರಡು ಒಂಬತ್ತೆರಡು
93
94
95
96
97
98
99 ತೊಂಬತೊಂಬತ್ತು ಒಂಬತೊಂಬು
100 ನೂರು ನೂರು

ಮೇಲೆ ತಿಳಿಸಿರುವಂತೆ ಎಣಿಕೆರೀತಿಯನ್ನು ಬದಲಾಯಿಸುವುದರಿಂದ, ಕನ್ನಡದ ಎಣಿಕೆರೀತಿಯನ್ನು ಹೊಸದಾಗಿ ಕಲಿಯುವರಿಗೆ ತುಂಬಾ ಸುಳುವಾಗುತ್ತದೆ. ಹಾಗು ಈಗಿರುವ ಗೊಂದಲಕ್ಕೆ ಎಡೆಮಾಡುವ ರೀತಿಯು ತಪ್ಪುತ್ತದೆ. 1 ರಿಂದ 8 ರವರಗೆ ಎಲ್ಲಾ ಎಣಿಕೆ ಕ್ರಮವು ‘ಉ’ಕಾರದಿಂದ ಕೊನೆಗೊಳ್ಳುತ್ತಿದ್ದು, ‘ಒಂಬತ್ತು’ ಎಂದು ‘ಹತ್ತು'(10)ಎಣಿಸುವ ಮೊದಲೇ ಉಲಿಯುವುದು ಹೊಸ ಕಲಿಗರಿಗೆ ಗೊಂದಲ ಮತ್ತು ತೊಡಕನ್ನುಂಟು ಮಾಡುತ್ತದೆ. 9 ಕ್ಕೆ ಒಂಬು ಎಂದು ಉಲಿಯುವುದು ಹುರುಳಿಂದ ಕೂಡಿರುತ್ತದೆ ಹಾಗು ಹೊಸ ಕಲಿಗರಿಗೆ ಮುಂದಿನ ಎಣಿಕೆಯನ್ನು ಕಲಿಯಲು ತುಂಬಾ ಸುಳುವಾಗುತ್ತದೆ.

ಎರಡು(2) ಹತ್ತು ಇಪ್ಪತ್ತು(20) ,ಮೂರು(3) ಹತ್ತು ಮುವತ್ತು(30), ಎಂಟು(8) ಹತ್ತು ಎಂಬತ್ತು(80) ಆಗುವಂತೆ, ಒಂಬು(9) ಹತ್ತು ಒಂಬತ್ತು(90) ಎಂದು ಎಣಿಸುವುದು ಸರಿಯಾದ ಕ್ರಮವಾಗುತ್ತದೆ. ಹಾಗೆಯೇ, ಒಂಬತೊಂದು(91), ಒಂಬತ್ತೆರಡು(92)…, ಒಂಬತ್ತೆಂಟು(98), ಒಂಬತ್ತೊಂಬು(99), ನೂರು(100) ಎಂದು ಮುಂದುವರೆಯುವುದು ಸರಿಯಾದ ಕ್ರಮವಾಗುತ್ತದೆ.

(ಚಿತ್ರಸೆಲೆ: little-genius)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. 11 honnodu=hadiondu
    12 hannerahu=hadieradu

  2. ಹನ್ನೊಂದು=ಹದಿಒಂದು
    ಹನ್ನೆರಡು=ಹದಿಎರಡು

ಅನಿಸಿಕೆ ಬರೆಯಿರಿ:

Enable Notifications