ಆಟೋಮೊಬಾಯ್ಲ್ ಇಂಜಿನೀಯರ್ ಅಳಿಯನ ದೀಪಾವಳಿ ಕಾರುಬಾರು

ಜಯತೀರ‍್ತ ನಾಡಗವ್ಡ.

Cars1

 

ದೀಪಾವಳಿಗೆ ಹೋಗುತಲಿರುವೆ ಮಾವನ ಮನೆಗೆ
ಬಾರಿ ಉಪಚಾರ ಮಾಡುವರು ಅತ್ತೆ-ಮಾವಾ
ನೆಚ್ಚಿನ ಅಳಿಯನಿಗೆ ಕೊಡಿಸಬಹುದೇ ಟೊಯೋಟಾ ಲಿವಾ?

ಊರಿನಲಿ ನಮ್ಮ ಮಾವನಿಗೆ ದೊಡ್ಡ ಇಮೇಜು
ನನಗೆ ಸಿಗಬಹುದೇ ಮಾರುತಿ ಸಿಯಾಜು,ಹೋಂಡಾ ಅಮೇಜು?

ಮುದ್ದಿನ ಮಗಳಿಗೆ ಇಂಜಿನೀಯರಿಂಗ್ ನಲ್ಲೇ ಕೊಡಿಸಿದ್ದರು ಪೇಮೆಂಟ್ ಸೀಟು
ಅವರ ಗನತೆ ಮರ‍್ಯಾದೆಗೆ ತಕ್ಕಂತೆ ಕೊಡಿಸುವರೇ ಶೆವರ‍್ಲೆ ಬೀಟು?

ಪೊಲೊ,ಪಿಗೊ,ಪುಂಟೋ
ಇವುಗಳು ನನ್ನ ಪಟ್ಟಿಯಲಿ ಉಂಟೋ!

ಮಾವನ ಮನೆಯಲ್ಲಿ ಈ ವರುಶ ನನ್ನ ಹಬ್ಬ ಬಲು ಜೋರು
ಬರಲಿ ನನ್ನ ಮನೆಗೊಂದು ಅಂದದ ಕಾರು.

( ಚಿತ್ರ ಸೆಲೆ: myautoshowroom.blogspot.com  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: