ಹಬ್ಬಕ್ಕೆ ವಿಶೇಶ ತಿಂಡಿ – ಶಂಕರಪಾಳಿ
– ಆಶಾ ರಯ್.
ಸಕ್ಕರೆ: 1 ಲೋಟ
ತುಪ್ಪ: 3/4 ಲೋಟ
ನೀರು: 1 ಲೋಟ
ಮೈದಾ ಹಿಟ್ಟು: 4 ಲೋಟ
ಅಡಿಗೆ ಸೋಡಾ: 1 ಚಿಟಿಕೆ
ಉಪ್ಪು:1/4 ಚಮಚ
ಎಣ್ಣೆ: ಕರಿಯಲು
ಮಾಡುವ ಬಗೆ:
1. ಒಂದು ಪಾತ್ರೆಯಲ್ಲಿ ನೀರು, ತುಪ್ಪ ಹಾಗೂ ಸಕ್ಕರೆ ಹಾಕಿ. ಸಕ್ಕರೆ ತುಪ್ಪ ಕರಗುವವರೆಗೆ ಬಿಸಿ ಮಾಡಿ.
2. ಇನ್ನೊಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು ಮತ್ತು ಅಡಿಗೆ ಸೋಡಾ ಕಲಿಸಿ.
3. ಸಕ್ಕರೆ ತುಪ್ಪದ ನೀರು ತಣ್ಣಗಾದ ಮೇಲೆ ಮೈದಾ ಹಿಟ್ಟಿಗೆ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
4. ಕಲಸಿದ ಹಿಟ್ಟನ್ನು ಒಂದು ಬಟ್ಟೆಯಿಂದ ಮುಚ್ಚಿ 1 ಗಂಟೆ ಬಿಡಿ.
5. ದೊಡ್ಡ ಲಿಂಬೆಯಶ್ಟು ಹಿಟ್ಟನ್ನು ಚಪಾತಿ ಮಣೆಯ ಮೇಲೆ 1/2 ಇಂಚು ದಪ್ಪದ ರೊಟ್ಟಿಯ ಹಾಗೆ ಲಟ್ಟಿಸಿ.
6. ಚಾಕುವಿನಿಂದ ವಜ್ರದ ಆಕಾರದಲ್ಲಿ ಕತ್ತರಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಬಿಸಿ ಆರಿದ ಮೇಲೆ ಗಾಳಿ ಆಡದ ಪೆಟ್ಟಿಗೆಯಲ್ಲಿ ಹಾಕಿಡಿ. ಶಂಕರಪಾಳಿಯನ್ನು 15 ದಿನಗಳವರೆಗೆ ಇಡಬಹುದು.
ಇತ್ತೀಚಿನ ಅನಿಸಿಕೆಗಳು