ಯಾವುದನ್ನು ಆಯಲಿ

ನಿಶ್ಕಲಾ ಗೊರೂರ್.

confusion
ಗೊಂದಲದ ಗೂಡಾಗಿದೆ ಮನ
ಯಾವುದನ್ನು ಆಯಲೆಮುದು,
ಉತ್ತರ ತಿಳಿಸುವೆಯ ಮನವೆ ಯಾವುದು ಸರಿಯೆಂದು.

ತುತ್ತು ಕೊಟ್ಟ ಅಮ್ಮನ ಮಾತನ್ನಾಯಲೋ,
ಬರವಸೆ ಕೊಟ್ಟ ಅಪ್ಪನ ಮಾತನ್ನಾಯಲೋ,
ಕಾಳಜಿ ಕೊಟ್ಟ ಬಂದುಗಳ ಮಾತನ್ನಾಯಲೋ,
ನಂಬಿಕೆ ಕೊಟ್ಟ ಪ್ರೀತಿಯ ಮಾತನ್ನಾಯಲೋ,
ಬಲ ಕೊಟ್ಟ ಸ್ನೇಹಿತನ ಮಾತನ್ನಾಯಲೋ,
ಬುದ್ದಿ ಕೊಟ್ಟ ಗುರುವಿನ ಮಾತನ್ನಾಯಲೋ,
ಇದಾವುದು ಬೇಡವೆಂದು ಬದುಕು ಕೊಟ್ಟ
ದೇವರ ಮಾತನ್ನಾಯಲೋ?

ಹಲವು ಆಯ್ಕೆಗಳ ನಡುವೆ
ಹಲವು ಕವಲುಗಳ ನಡುವೆ
ಇಬ್ಬಂದಿಯಂತಾಗಿದೆ ಮನ
ಯಾವುದು ಮೊದಲೊ ಯಾವುದು ಕೊನೆಯೊ
ಬ್ರಾಂತ ಸ್ತಿತಿಯನ್ನಾದಿದೆ ಮನ
ಇದೇ ನನ್ನ ಆಯ್ಕೆಯೆಂದು.

(ಚಿತ್ರ ಸೆಲೆ : bubblesmac.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: