‘ಅರಿಮೆಯ ಹೊನಲು’ – ಈ ವರುಶದ ಬರಹಗಳ ಗೊಂಚಲು
ಇಂದು ನಲ್ಮೆಯ ಹೊನಲಿಗೆ ಎರಡು ವರುಶಗಳು ತುಂಬಿವೆ. ಬರಹಗನ್ನಡವನ್ನು ಎಲ್ಲ ಕನ್ನಡಿಗರಿಗೆ ತಲುಪಿಸಲು ಎರಡು ವರುಶಗಳ ಹಿಂದೆ ಇಟ್ಟ ಈ ಹೆಜ್ಜೆ ಇಂದು ಗಟ್ಟಿಯಾಗಿ ನೆಲೆಯೂರಿ, ಹುರುಪಿನಿಂದ ಸಾಗುತ್ತಿರುವುದು ಹಿಗ್ಗಿನ ಸಂಗತಿ. ಹಲ ಬಗೆಯ ಬರಹಗಳಿಂದ ಓದುಗರನ್ನು ಸೆಳೆದಿರುವ ಹೊನಲು, ಸಾಯನ್ಸ್ ಮತ್ತು ಟೆಕ್ನಾಲಜಿ ಬರಹಗಳನ್ನು ಹುರುಪಿನಿಂದ ಹರಿಸಿ ತನ್ನ ಹೆಚ್ಚುಗಾರಿಕೆಯನ್ನು ಎತ್ತಿಸಾರುತ್ತಿದೆ.
ಕಳೆದ ಒಂದು ವರುಶದಲ್ಲಿ 170 ಮತ್ತು ಎರಡು ವರುಶದಲ್ಲಿ ಒಟ್ಟಾರೆಯಾಗಿ 420 ಸಾಯನ್ಸ್ ಮತ್ತು ಟೆಕ್ನಾಲಜಿ ಬರಹಗಳು ಹೊನಲಿನಲ್ಲಿ ಮೂಡಿಬಂದಿದ್ದು, ಕನ್ನಡದ ಮೂಲಕ ಕನ್ನಡಿಗರ ನಾಳೆಗಳನ್ನು ಕಟ್ಟುವತ್ತ ದಿಟ್ಟ ಹೆಜ್ಜೆಗಳೇ ಸರಿ. ಕನ್ನಡದಲ್ಲಿ ಅದಾಗುವುದಿಲ್ಲ, ಇದಾಗುವುದಿಲ್ಲ ಅನ್ನುವುದನ್ನು ಹಿಮ್ಮೆಟ್ಟಿಸಿ ನಿಂತಿರುವ ಬರಹಗಾರರು ಒಂದೆಡೆಯಾದರೆ, ಕನ್ನಡದಲ್ಲಿ ಈ ತರಹದ ಒಳ್ಳೆಯ ಸಾಯನ್ಸ್ ಬರಹಗಳನ್ನೂ ಬರೆಯಬಹುದಾ? ಅಂತಾ ಬೆರಗಾಗಿ, ಹೊನಲಿನ ಬೆನ್ನುತಟ್ಟುತ್ತಿರುವ ಓದುಗರ ಬಳಗ ಇನ್ನೊಂದೆಡೆ. ಒಟ್ಟಿನಲ್ಲಿ ಬೆಳಕು ಕತ್ತಲೆಗಳಾಚೆ ’ಅರಿಮೆಯ ಹೊನಲು’ ಹರಿಯುತ್ತಿದೆ.
ಕಳೆದ ಒಂದು ವರುಶದಲ್ಲಿ ಮೂಡಿಬಂದಿರುವ ಆಯ್ದ ಸಾಯನ್ಸ್ ಮತ್ತು ಟೆಕ್ನಾಲಜಿ ಬರಹಗಳ ಹೊತ್ತಗೆ ಇದೋ ನಿಮ್ಮ ಮುಂದಿದೆ. ಈ ಹೊತ್ತಗೆಯನ್ನು ಇಳಿಸಿಕೊಳ್ಳಿ, ಓದಿ, ನಿಮ್ಮ ಗೆಳೆಯ-ಗೆಳತಿಯರೊಂದಿಗೆ ಹಂಚಿಕೊಳ್ಳಿ, ಅರಿಮೆಯ ಈ ಚಳುವಳಿಯಲ್ಲಿ ನೀವೂ ಪಾಲ್ಗೊಳ್ಳಿ.
(ಹೊತ್ತಗೆಯನ್ನು ಇಳಿಸಿಕೊಳ್ಳಲು ಇಲ್ಲಿ ಒತ್ತಿ)
ಇತ್ತೀಚಿನ ಅನಿಸಿಕೆಗಳು