ಸನಿಹದ ಕಾತರ

– ಪುಟ್ಟರಾಜು.ಕೆ.ಎಸ್.

love

ನೀ ಸನಿಹಕೆ ಬರುವೆ,
ನನ್ನ ಮನದ ಮರೆಯಲ್ಲಿ ಕಾಡುವೆ…
ನೀ ಕನಸ ಕೊಡುವೆ,
ಅದರಲ್ಲಿ ನೀ ನನ್ನ ಜೊತೆ ಇರುವೆ….
ಈ ಕಲ್ಪನೆಯ ಪರವಶದ ಚಿತ್ತಾರವು ನೀನು..
ನನ್ನೀ ಜನುಮದ ಸಾರ‍್ತಕತೆಗೆ ಬಳುವಳಿಯು ನೀನು….!!!!

ಬಾವನೆಯ ಬಾನಂಗಳದಲ್ಲಿ,
ಮೋಡಗಳ ಕಲರವವ ಕಂಡಿಹೆನು…
ಬಿಳಿ ಹಾಳೆಯಂತಿರುವ ಚಂದಿರನ ಮೇಲೆ,
ನಿನ್ನ ಚಿತ್ತಾರವ ಬಿಡಿಸಿಹೆನು…..
ಈ ಕಲ್ಪನೆಗೆ ಕಾರಣವೇನು,
ನಿನ್ನ ಕಣ್ಣಂಚಲಿ ಕಾಡಿಗೆಯು ನಾನು…!!!!

ಮನಸೆಂಬ ಅಂಗಳದಲ್ಲಿ,
ಬಣ್ಣದ ರಂಗೋಲಿಯ ಕಂಡಿಹೆನು…
ಮಳೆ ಹನಿಯು ಜಿನುಗಲಾರಂಬಿಸಲು,
ಪ್ರತಿ ಹನಿಯಲ್ಲು ನಿನ್ನ ಬಿಂಬವ ಕಾಣುತಿರುವೆನು…
ಈ ಕಲ್ಪನೆಗೆ ಕಾರಣವು ನೀನು,
ನಿನ್ನ ತುಟಿಯಲ್ಲಿ ಅವಿತಿರುವ ಮುಗುಳ್ನಗೆಯು ನಾನು!!!

(ಚಿತ್ರಸೆಲೆ:  blog.asha.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: