ಒಂದಾಗೂದು ಅಂದ್ರ ಇದs ಏನು?

– ಬಸವರಾಜ್ ಕಂಟಿ.

 

ಹತ್ರ ಇರಲಾರ‍್ದ್ರೂ ನೀ ಇದ್ದಂಗs ಅನಿಸ್ತದ,
ನನ್ ಹೆಜ್ಜ್ಯಾಗ ಹೆಜ್ಜಿ ತುಳದಂಗ್ ಅನಿಸ್ತದ,
ಮಯ್ ನಂದಾದ್ರು ನೆರಳು ನಿಂದs ಅನಿಸ್ತದ,
ಇಬ್ರೂ ಒಂದಾಗೂದು ಅಂದ್ರ ಇದs ಏನು?

ನಿನ್ನ ಕನಸಿನ್ಯಾಗ ಹಗಲ ಮೂಡಿ,
ನಿನ್ನ ನೆನಸಿನ್ಯಾಗ ಹೊತ್ತ ಮಾಡಿ,
ಅರಿವು-ಮರಿವಿನ ನಡು ದಿನಾ ದೂಡಿ,
ಇಬ್ರೂ ಒಂದಾಗೂದು ಅಂದ್ರ ಇದs ಏನು?

ನೆನಪಿನ ಚೀಲದ ತುಂಬ ನಿಂದs ಮುತ್ತು,
ನೀ ಜೋಡಿ ಇದ್ರ ಇಲ್ಲ ಎದಕ್ಕೂ ಪುರಸೊತ್ತು,
ಕಾಣದ ಜಗದಾಗೂ ಬೇಕು ನಿಂದs ಹೊತ್ತು,
ಇಬ್ರೂ ಒಂದಾಗೂದು ಅಂದ್ರ ಇದs ಏನು?

ಈ ಬಾಳೆ ನೀ-ನಾ ಕೂಡಿ ಹೊಸದ ದಾರ,
ಬಿಡಿಸಿಕೊಂಡ್ರ ಇಲ್ಲ ಅದರಾಗ ಸಾರ,
ಕೂಡಿ ಈಜಿದ್ರ ಆದೇವು ಪಾರ,
ಇಬ್ರೂ ಒಂದಾಗೂದು ಅಂದ್ರ ಇದs ಏನು?

(ಚಿತ್ರಸೆಲೆ:  blog.asha.org )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Ashok Betageri says:

    ಬಸವರಾಜ್ ಕಂಟಿ ರವರ ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮಗೆ ನನ್ನ ಹೃದಯಪೂರ್ವಕ ನಮನ

Ashok Betageri ಗೆ ಅನಿಸಿಕೆ ನೀಡಿ. Cancel reply

Your email address will not be published. Required fields are marked *