ಮಾನವೀಯತೆ ಮೆರೆದ ‘ಅರುಣಾ’ ಕತೆ

ನಾಗರಾಜ್ ಬದ್ರಾ.

aruna-070311-1433153809-397

ಮಾನವೀಯತೆ ಸತ್ತುಹೋಗಿ ಜನರು ಸಹಾಯ ಮಾಡುವುದನ್ನೇ ಮರೆತಿರುವ ಕಲಿಯುಗವಿದು. ಹೆತ್ತ ತಂದೆ-ತಾಯಿಯನ್ನು ನೋಡಿಕೊಳ್ಳಲು ಆಗದೆ ವ್ರುದ್ರಾಶಮಗಳಿಗೆ ಕಳಿಸುತ್ತಿರುವ ಕಲಿಯುಗವಿದು. ಒಡಹುಟ್ಟಿದ ಅಣ್ಣ-ತಮ್ಮಂದಿರು ಆಸ್ತಿಗೋಸ್ಕರ ಒಬ್ಬರನ್ನೊಬ್ಬರು ಕೊಲೆಮಾಡಲು ಹೇಸದ ಕಾಲವಿದು. ಬಾರತ ದೇಶವು ಮಾನವೀಯತೆಗೋಸ್ಕರ ಜಗತ್ತಿನಲ್ಲಿ ಪ್ರಸಿದ್ದವಾದುದು, ಮದರ್ ತೇರೇಸಾ ಅಂತವರು ಹುಟ್ಟಿದ ದೇಶವಿದು. ಆದರೆ ಈ ಕಲಿಯುಗದಲ್ಲಿ ಇಲ್ಲಿಯೂ ಮಾನವೀಯತೆ ಸತ್ತುಹೋಗಿದೆ, ಎಂದು ಜನರು ಆಡಿಕೊಳ್ಳುತ್ತಿರುವಾಗಲೇ ದೇಶದ ಜನರಲ್ಲಿ ಇರುವ ಮಾನವೀಯತೆಯನ್ನು ಜಗತ್ತಿನಲ್ಲಿ ಸಾರಿ ಹೇಳುವ ಮತ್ತೊಂದು ಗಟನೆ ನಡೆದಿದೆ! ಅದೇ, ಕನ್ನಡತಿ ನರ‍್ಸ್ ಅರುಣಾ ಶಾನಬಾಗರವರ ಕರುಣಾಜನಕ ಕತೆ.

ಅರುಣಾರವರು ಮುಂಬೈಯ ಕಾಸಗಿ ಆಸ್ಪತ್ರೆಯಲ್ಲಿ ನರ‍್ಸ್ ಆಗಿ ಕೆಲಸಮಾಡುತ್ತಿದ್ದರು. ಆಸ್ಪತ್ರೆಯ ಪ್ರತಿಯೊಬ್ಬರಿಗೂ ಆಕೆ ಒಳ್ಳೆಯ ಸ್ನೇಹಿತೆ. ಅದೇ ಆಸ್ಪತ್ರೆಯ ಡಾಕ್ಟರ್ ಒಬ್ಬರು ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಅವರನ್ನು ಮದುವೆ ಮಾಡಿಕೊಂಡು ಸುಂದರ ಸಂಸಾರವನ್ನು ನಡೆಸುವ ಕನಸು ಕಾಣುತ್ತಿದ್ದರು. ಒಂದು ದಿನ ಅವರಿಬ್ಬರ ಕನಸು ನುಚ್ಚುನೂರಾಯಿತು. ಅದೇ ಆಸ್ಪತ್ರೆಯ ವಾರ‍್ಡ್ ಬಾಯ್ ಒಂದು ದಿನ ಅರುಣಾರನ್ನು ಕೆಡಿಸಿ, ತಲೆಗೆ ಜೋರಾಗಿ ಹೊಡೆದ. ಈ ಕ್ರೂರ ಮ್ರುಗನ ಕಾಮದಾಹಕ್ಕೆ ಅವರ ಜೀವನವೇ ಹಾಳಾಗಿಹೋಯಿತು. ತಲೆಗೆ ಜೋರಾಗಿ ಬಿದ್ದ ಪೆಟ್ಟಿಗೆ ಅವರು ಕೋಮಾಗೆ ಹೋಗಿಬಿಟ್ಟರು.

ಡಾಕ್ಟರ್ ಗಳು ಅವರು ಕೋಮಾದಿಂದ ಹೊರಗೆ ಬರವುದು ಅನುಮಾನ ಎಂದು ಹೇಳಿದರು. ಆ ದೇವರೇ ಅವರನ್ನು ಕಾಪಾಡಬೇಕು ಎಂದುಕೊಂಡರು. ಅರುಣಾರ ಮನೆಯವರು ಕೂಡ ಸ್ವಲ್ಪ ದಿನಗಳ ಕಾಲ ಕಾದು ನೋಡಿದರು. ಆದರೆ ಅರುಣಾ ಮಾತ್ರ ಕೋಮಾದಿಂದ ಹೊರಬರಲಿಲ್ಲ. ಕೊನೆಗೆ ಅವರನ್ನು ಆ ಆಸ್ಪತ್ರೆಯಲ್ಲಿಯೇ ಮನೆಯವರು ಬಿಟ್ಟುಹೋದರು. ಬಳಿಕ ಆಸ್ಪತ್ರೆಯ ಸಿಬ್ಬಂದಿಯವರು ಮತ್ತು ಮೇಲುಗರು 42 ವರ‍್ಶಗಳ ಕಾಲ ನಿಸ್ವಾರ‍್ತವಾಗಿ ಅರುಣಾರ ಸೇವೆಯನ್ನು ಮಾಡಿದರು. ಈ ಕಲಿಯುಗದಲ್ಲಿ ಆಸ್ಪತ್ರೆಯವರು ರೋಗಿಗಳಿಂದ ಸುಮ್ಮನೆ ಸಿಕ್ಕಾಪಟ್ಟೆ ದುಡ್ಡು ವಸೂಲಿ ಮಾಡುತ್ತಿರುವಾಗ, ಇವರ ಮಾನವೀಯತೆಯ ಸೇವೆಗೆ ಎಲ್ಲರೂ ತಲೆಬಾಗಬೇಕಿದೆ.

ಆಸ್ಪತ್ರೆಯ ಸಿಂಬ್ಬದಿಯವರು ಅವರಿಗೆ ದಿನಾಲೂ ಊಟ, ಸ್ನಾನ, ದಿನದ ಚಟುವಟಿಕೆಗಳನ್ನು ಮಾಡಿಸುವ ಕೆಲಸವನ್ನು ಸುಮಾರು 42 ವರ‍್ಶಗಳ ಕಾಲ ಮಾಡಿದ್ದಾರೆ. ಅವರಿಗೋಸ್ಕರ ಒಂದು ಹಾಸಿಗೆಯನ್ನೇ ಮೀಸಲಿಟ್ಟಿದ್ದರು. ಅವರ ಎಲ್ಲಾ ಔಶದಿಗಳ ವೆಚ್ಚವನ್ನು ಆಸ್ಪತ್ರೆಯವರೇ ನೋಡಿಕೊಂಡಿದ್ದಾರೆ. ಅವರಲ್ಲಿ ಯಾರೂ ಅರುಣಾರವರ ಒಡಹುಟ್ಟಿದವರಲ್ಲ, ಹೆತ್ತವರಲ್ಲ, ನೆಂಟರಲ್ಲ, ಆದರೂ ಅವರೆಲ್ಲರೂ ನಿಸ್ವಾರ‍್ತ ಸೇವೆ ಮಾಡಿದ್ದಾರೆ. ಅವರೆಲ್ಲರಿಗೂ ನನ್ನದೊಂದು ಸಲಾಂ.

ಅರುಣಾರನ್ನು ಪ್ರೀತಿಸುತ್ತಿದ್ದ ಆ ಆಸ್ಪತ್ರೆಯ ಡಾಕ್ಟರ್ ಇಂದಲ್ಲ ನಾಳೆ ಕೋಮಾದಿಂದ ಹೊರಬರಬಹುದು ಎಂದು ಪ್ರತಿದಿನವು ನೋಡಲು ಬರುತ್ತಿದ್ದರು. ಮನೆಯವರ ಒತ್ತಾಯಾದ ಮೇಲೆ ಇನೊಬ್ಬಳನ್ನು ಮದುವೆಯಾಗಿದ್ದರು ಕೂಡ ಅರುಣಾರ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ಕಲಿಯುಗದಲ್ಲಿ ಬರೀ ದುಡ್ಡಿಗೋಸ್ಕರ ಪ್ರೀತಿ ಮಾಡುವಂತೆ ನಾಟಕವಾಡುವ ಜನರಿರುವಾಗ ಈ ರೀತಿಯ ನಿಜವಾದ, ಕಪಟವಿಲ್ಲದ ಪ್ರೀತಿಗೆ ನನ್ನದೊಂದು ಸಲಾಂ. ಸುಮಾರು ವರ‍್ಶಗಳಿಂದ ಅರುಣಾರ ಸ್ತಿತಿ ಯಾವುದೇ ಬದಲಾವಣೆ ಆಗದ ಕಾರಣ, ಅವರ ಸ್ನೇಹಿತೆ ಒಬ್ಬರು 2011ರಲ್ಲಿ ಅರುಣಾಗೆ ದಯಾಮರಣ ನೀಡಲು ಸುಪ್ರಿಂ ಕೋರ‍್ಟಗೆ ಅರ‍್ಜಿ ಸಲ್ಲಿಸಿದರು. ಆದರೆ ಸುಪ್ರೀಂ ಕೋರ‍್ಟ್ ಆರ‍್ಜಿಯನ್ನು ತಿರಸ್ಕರಿಸಿತ್ತು. ಕೊನೆಗೆ ಮೇ 18, 2015 ರಂದು ಅರುಣಾರವರು ನಮೆಲ್ಲರನ್ನು ಬಿಟ್ಟು ಮತ್ತೆ ಮರಳಿಬಾರದ ಲೋಕಕ್ಕೆ ಹೋರಟುಹೋದರು. ಅವರು 42 ವರ‍್ಶಗಳ ಕಾಲ ಇದ್ದ ಆಸ್ಪತ್ರೆಯ ವಾರ‍್ಡನ್ನು ‘ಅರುಣಾ ವಾರ‍್ಡ್‘ ಎಂದು ಹೆಸರಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳೋಣ.

(ಚಿತ್ರ ಸೆಲೆ: authintnews)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: