ತಂದೂರಿ ಪೊಂಪ್ರೇಟ್ ಮೀನು

ಆಶಾ ರಯ್.

Meenuಬೇಕಾಗುವ ಸಾಮಗ್ರಿಗಳು:

ಪೊಂಪ್ರೇಟ್ ಮೀನು : 2
ಲಿಂಬೆ ರಸ: 1 ದೊಡ್ಡ ಚಮಚ
ನೀರು ತೆಗೆದ ಮೊಸರು (Hung Curd): 1/2 ಬಟ್ಟಲು
ಅಚ್ಚ ಕಾರದ ಪುಡಿ: 1 ಚಮಚ
ಶುಂಟಿ ಬೆಳ್ಳುಳ್ಳಿ ಪೇಸ್ಟ್: 1 ಚಮಚ
ಗರಂ ಮಸಾಲೆ ಪುಡಿ: 1/2 ಚಮಚ
ಓಮ (ಅಜವಾನ): 1/4 ಚಮಚ
ಕಡ್ಲೆ ಹಿಟ್ಟು: 1.5 ಚಮಚ
ಅರಿಶಿನ: 1/4 ಚಮಚ
ಉಪ್ಪು
ಬೆಣ್ಣೆ

ಮಾಡುವ ಬಗೆ:

ಇಡೀ ಮೀನನ್ನು ಸರಿಯಾಗಿ ತೊಳೆದು ಅದರ ಮೇಲೆ ಗೆರೆ ಎಳೆದುಕೊಳ್ಳಿ (gashes). ಉಪ್ಪು ಅರಿಶಿನ ಮತ್ತು ಲಿಂಬೆರಸವನ್ನು ಸರಿಯಾಗಿ ಸವರಿ 10 ನಿಮಿಶ ಬಿಡಿ. ಒಂದು ಸಣ್ಣ ಕಾವಲಿ ಬಿಸಿ ಮಾಡಿ ಒಮದ ಕಾಳನ್ನು ಹುರಿಯಿರಿ, ಅದಕ್ಕೆ ಕಡ್ಲೆ ಹಿಟ್ಟು ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ಹಿಟ್ಟು ಕಪ್ಪಾಗದ ಹಾಗೆ ನೋಡಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ನೀರು ತೆಗೆದ ಮೊಸರು, ಕಾರದ ಪುಡಿ, ಉಪ್ಪು, ಶುಂಟಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆ ಪುಡಿಯನ್ನು ಕಲಸಿ, ಹುರಿದ ಓಮ ಮತ್ತು ಕಡ್ಲೆಹಿಟ್ಟನ್ನು ಹಾಕಿ ಸರಿಯಾಗಿ ಕಲಸಿಕೊಳ್ಳಿ. ಉಪ್ಪು, ಅರಿಶಿನ, ಲಿಂಬೆ ಹಚ್ಚಿದ ಮೀನಿಗೆ ಮೊಸರಿನ ಮಿಶ್ರಣವನ್ನು ಹಚ್ಚಿ 1/2 ಗಂಟೆ ಪ್ರಿಡ್ಜ್ ನಲ್ಲಿಡಿ.

ಬಳಿಕ ಓವನ್ ಅನ್ನು 180 ಡಿಗ್ರಿ ಸೆಲ್ಸಿಯಸ್ನಲ್ಲಿ 5 ನಿಮಿಶ ಮೊದಲೆ ಬಿಸಿ ಮಾಡಿಕೊಳ್ಳಿ. ಬೇಗಡೆ ಹಾಳೆ (ಪ಼ಾಯಿಲ್ ಪೇಪರ‍್) ಮೇಲೆ ಬೆಣ್ಣೆ ಸವರಿ ಮೀನನ್ನು ಜೋಡಿಸಿ ಒವನ್ ಒಳಗೆ ಇಡಿ. 180 ಡಿಗ್ರಿಯಲ್ಲಿ 15-20 ನಿಮಿಶ ಸುಡಿ. ಸುಟ್ಟ ಮೀನಿನ ಮೇಲೆ ಪುದೀನಾ ಪುಡಿ ಮತ್ತು ಚಾಟ್ ಮಸಾಲೆ ಉದುರಿಸಿ ಲಿಂಬೆಹಣ್ಣಿನೊಂದಿಗೆ ಬಡಿಸಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: