ಮಲೆನಾಡಿನ ಕಳಿಲೆಸಾರು

ರೇಶ್ಮಾ ಸುದೀರ್.

Kalile_2

ಬೇಕಾಗುವ ಅಡಕಗಳು:

ಕಳಿಲೆ—–1 ದೊಡ್ಡ ಬಟ್ಟಲು
ತೆಂಗಿನಕಾಯಿ–1/2 ಬಾಗ
ಅಚ್ಚಕಾರದಪುಡಿ–3 ಟಿ ಚಮಚ
ದನಿಯಬೀಜ—–1 ಟಿ ಚಮಚ
ಸಾಸಿವೆ——–1/4 ಟಿ ಚಮಚ
ಜೀರಿಗೆ———1/4 ಟಿ ಚಮಚ
ಅಕ್ಕಿ———–1 ಟಿ ಚಮಚ (ಹುರಿದಿರಬೇಕು)
ನೀರುಳ್ಳಿ——–1 ಗೆಡ್ಡೆ
ಬೆಳ್ಳುಳ್ಳಿ———1 ಗೆಡ್ಡೆ

Kalile_1

ಚಿತ್ರ 1

ಮಾಡುವ ಬಗೆ:

ಕಳಿಲೆಯನ್ನು ಚಿತ್ರದಲ್ಲಿ (ಚಿತ್ರ 1) ತೋರಿಸಿದಂತೆ ಹೆಚ್ಚಿಕೊಳ್ಳಿ. ಹೆಚ್ಚಿದ ಕಳಿಲೆಯನ್ನು 3 ದಿನಗಳ ಕಾಲ ನೀರಿನಲ್ಲಿ ಹಾಕಿಡಬೇಕು. ಪ್ರತಿದಿನ ಕಳಿಲೆಯನ್ನು ಹಿಸುಕಿ ತೊಳೆದು ಬೇರೆ ನೀರನ್ನು ಹಾಕಿಡಬೇಕು. 3 ನೇ ದಿನ ಕಳಿಲೆಯ ನೀರನ್ನು ಚೆಲ್ಲಿ ಅದಕ್ಕೆ ಅಕ್ಕಿ ತೊಳೆದ ನೀರನ್ನು ಹಾಕಿ ಇಡಿ (ಬೆಳಿಗ್ಗೆ ಸಾರು ಮಾಡುವುದಾದರೆ ಸಂಜೆ ಅಕ್ಕಿ ತೊಳೆದ ನೀರು ಹಾಕಬೇಕು). ಅಕ್ಕಿ ತೊಳೆದ ನೀರಿನ ಸಹಿತ ಪಾತ್ರೆಯನ್ನು ಒಲೆಯ ಮೇಲೆ ಬೇಯಲು ಇಡಿ(ಕುಕ್ಕರ್ ಗೆ ಬೇಯಲು ಹಾಕಬೇಡಿ). ನೀರು ಆರುತ್ತಾ ಬರುವಾಗ ಕಳಿಲೆ ಬೆಂದಿರುತ್ತದೆ.

ಮಸಾಲೆ: ತೆಂಗಿನತುರಿಗೆ ನೀರುಳ್ಳಿ, ಬೆಳ್ಳುಳ್ಳಿ ಮತ್ತು ಅಚ್ಚಕಾರದಪುಡಿ ಹಾಕಿ. ಅಕ್ಕಿ, ಸಾಸಿವೆ, ಜೀರಿಗೆ ಹಾಗು ದನಿಯಬೀಜವನ್ನು ಹುರಿದು ತೆಂಗಿನಕಾಯಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಈ ಮಸಾಲೆಯನ್ನು ಬೆಂದ ಕಳಿಲೆಗೆ ಹಾಕಿ ಕುದಿಸಿ. ಕರಿಬೇವಿನಸೊಪ್ಪು, ಸಾಸಿವೆ ಹಾಗು ಬೆಳ್ಳುಳ್ಳಿ ಒಗ್ಗರಣೆ ಕೊಟ್ಟು ಸಾರನ್ನು ಒಲೆಯಿಂದ ಇಳಿಸಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: