ಮದ್ದೂರು ವಡೆ ಮಾಡುವ ಬಗೆ
– ಪ್ರೇಮ ಯಶವಂತ.
ಮದ್ದೂರು ವಡೆ, ಮಂಡ್ಯ ಜನರ ನೆಚ್ಚಿನ ತಿನಿಸುಗಳಲ್ಲೊಂದು. ಈ ಬರಹದಲ್ಲಿ ಮದ್ದೂರು ವಡೆಯನ್ನು ಮಾಡುವ ಬಗೆಯನ್ನು ತಿಳಿದುಕೊಳ್ಳೋಣ.
ಬೇಕಾಗಿರುವ ಅಡಕಗಳು:
ಮಯ್ದಾ ಹಿಟ್ಟು – 1 ಬಟ್ಟಲು
ಅಕ್ಕಿ ಹಿಟ್ಟು – 1/2 ಬಟ್ಟಲು
ರವೆ – 1/2 ಬಟ್ಟಲು
ಬೆಣ್ಣೆ – 1 ದೊಡ್ಡ ಚಮಚ
ಈರುಳ್ಳಿ – 1 (ಸಣ್ಣಗೆ ಹೆಚ್ಚಿದ್ದು)
ಹಸಿ ಮೆಣಸಿನಕಾಯಿ – 5-6 (ಸಣ್ಣಗೆ ಹೆಚ್ಚಿದ್ದು) ಅತವ ಕಾರಕ್ಕೆ ತಕ್ಕಶ್ಟು
ಕರಿಬೇವು -10-12 ಎಳೆಗಳು (ಸಣ್ಣಗೆ ಹೆಚ್ಚಿದ್ದು)
ಕೊತ್ತಂಬರಿ ಸೊಪ್ಪು – 1/2 ಬಟ್ಟಲು (ಸಣ್ಣಗೆ ಹೆಚ್ಚಿದ್ದು)
ಹಸಿ ಶುಂಟಿ – 1-2 ಇಂಚು (ಸಣ್ಣಗೆ ಹೆಚ್ಚಿದ್ದು)
ಹಿಂಗು – 1/4 ಚಮಚ
ಉಪ್ಪು – ರುಚಿಗೆ ತಕ್ಕಶ್ಟು
ಕರಿಯಲು ಎಣ್ಣೆ
ಮಾಡುವ ಬಗೆ:
ಮೇಲೆ ತಿಳಿಸಿರುವ ಎಲ್ಲ ಅಡಕಗಳನ್ನು ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಕಲಸಿ. ಆಮೇಲೆ ಒಂದು ಸವ್ಟಿನಲ್ಲಿ ನೀರು ಹಾಕಿಕೊಂಡು ಹಿಟ್ಟೆಲ್ಲಾ ಒಂದು ಗಟ್ಟಿ ಮುದ್ದೆಯಾಗುವಂತೆ ಕಲಸಿಕೊಳ್ಳಿ. ಹೀಗೆ ಕಲಸಿಕೊಂಡ ಹಿಟ್ಟನ್ನು 10- 15 ನಿಮಿಶ ನೆನೆಯಲು ಬಿಡಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿಕೊಳ್ಳಿ. ಈಗ ಸಣ್ಣ ಪೂರಿ ಮಾಡುವಶ್ಟು ಹಿಟ್ಟನ್ನು ಎರಡು ಅಂಗಯ್ ನಡುವೆ ಇಟ್ಟು ಬಿಲ್ಲೆಗಳಾಗಿ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗು ಕರಿಯಿರಿ. ಬಿಸಿ ಬಿಸಿ ಮದ್ದೂರು ವಡೆ ನಿಮ್ಮ ನೆಚ್ಚಿನ ಚಟ್ನಿಯೊಂದಿಗೆ ಸವಿಯಲು ಸಿದ್ದ.
ಇತ್ತೀಚಿನ ಅನಿಸಿಕೆಗಳು