ಉಳಿದ ಕಹಿ ಮಾತ್ರ ನನ್ನದೆ

ಮನೋಜ್  ಸಿದ್ದಯ್ಯ.

lonely-man
ಏಕೊ ನಿನ್ನ ನಗು ನನ್ನ ಬೆನ್ನತ್ತಿದೆ
ನಿದಾನಿಸಿ ನಡೆಯಲೆ
ಮಾತಿನ ನಡುವೆ ಮೌನ ಸುಳಿಯುತ್ತಲೆ
ಕ್ಶಣದ ಕಾಲು ಕಟ್ಟಿಬಿಡಲೆ

ಮಾತು ನಿಂತರು ಮನಸ್ಸು ನಿಲ್ಲದು
ಚರ‍್ಚೆಯಲ್ಲಾ ನಿನ್ನದೆ
ಮುಪ್ಪು ರಾತ್ರಿಯ ಮಗುವಿನಂತಹ ಕನಸು
ವಿಶಯವೆಲ್ಲಾ ನಿನ್ನದೆ

ಕನಸು ನಿಲ್ಲದು ನನಸು ಆಗದು
ಉಳಿದ ಕಹಿ ಮಾತ್ರ ನನ್ನದೆ

( ಚಿತ್ರ ಸೆಲೆ: captiveofthoughts.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: