ಕನ್ನಡಿಗರ ಹೆಮ್ಮೆಯ ಹಿನ್ನಡವಳಿಯರಿಗ ಡಾ. ಸೂರ‍್ಯನಾತ ಕಾಮತ್

ಕಿರಣ್ ಮಲೆನಾಡು.

Kamath

ಕರ‍್ನಾಟಕದ ಬಗೆಗಿನ ಹಿನ್ನಡವಳಿಕೆಯ ಅರಕೆಯಲ್ಲಿ (research) ಮೊದಲಿಗರಾಗಿ ನಿಲ್ಲುವವರು ಡಾ. ಸೂರ‍್ಯನಾತ ಕಾಮತ್. ಕರುನಾಡಿನ ಹಿನ್ನಡವಳಿಯನ್ನು ಅರಿಯಲು ಅವರು ಕೊಟ್ಟಿರುವ ಕೊಡುಗೆ ಅಪಾರ. ನಿಮಗೆ ನೆನಪಿರಬಹುದು, ಬೆಂಗಳೂರು ದೂರದರ‍್ಶನದಲ್ಲಿ (ಚಂದನ) ‘ಒಂದಿಶ್ಟು ಇತಿಹಾಸ‘ ಎಂಬ ಹಮ್ಮುಗೆ ಮೂಡಿಬರುತ್ತಿತ್ತು. ಅದರ ಹಮ್ಮುಗೆಗಾರರು ಬೇರೆ ಯಾರು ಅಲ್ಲ, ಡಾ. ಸೂರ‍್ಯನಾತ್ ಕಾಮತ್ ಆಗಿದ್ದರು.

ಡಾ. ಸೂರ‍್ಯನಾತ ಕಾಮತ್ ಅವರ ಕಿರುಪರಿಚಯ:
ಕಾಮತ್ ಅವರು ಎಪ್ರಿಲ್ 26, 1937 ರಲ್ಲಿ ಬೆಳತಂಗಡಿಯಲ್ಲಿ ಹುಟ್ಟಿದರು. ಇವರ ತಂದೆ ಉಪೇಂದ್ರ ಕಾಮತ್ ಮತ್ತು ತಾಯಿ ಪದ್ಮಾವತಿ. ದಾರವಾಡದ ಕಲಿಕೆವೀಡಿನಲ್ಲಿ (university) ಹಿನ್ನಡವಳಿ ಮತ್ತು ಸೊಮ್ಮರಿಮೆ(economics)ಯಲ್ಲಿ ಎಂ.ಎ ಪದವಿ ಪಡೆದ ಇವರು, ದಾರವಾಡದಲ್ಲಿ ಕಲಿಯುತ್ತಿರುವಾಗ ಹೆಸರಾಂತ ಹಿನ್ನಡವಳಿಯರಿಗರಾದ ಪ್ರೊ. ಬಿ.ವಿ. ಕಾಳೆ, ಪ್ರೊ. ಬಿ. ಎ. ಸಾಲೆತ್ತೂರ್ ಮತ್ತು ಪ್ರೊ. ಜಿ.ಎಸ್. ದೀಕ್ಶಿತ್ ಅವರಿಂದ ಹಿನ್ನಡವಳಿಕೆಯ ಸಂಗತಿಗಳನ್ನು ಕಲಿತರು. ತದನಂತರದಲ್ಲಿ ಬೆಂಗಳೂರು ಕಲಿಕೆವೀಡಿನಲ್ಲಿ ಪೆರ‍್ಮಾತುಗ ಮತ್ತು ಕಲಿಕಡತರಾಗಿ(reader) 1968 ರಿಂದ 1981 ರವರೆಗೆ ಸೇವೆ ಸಲ್ಲಿಸಿದರು. ಮುಂಬೈ ಕಲಿಕೆವೀಡಿನಲ್ಲಿ ‘ತುಳುವಾಸ್ ಇನ್ ವಿಜಯನಗರ ಟೈಮ್ಸ್’ ಎಂಬ ಹೆದ್ದೇಳಿಕೆ (Thesis) ಬರಹಕ್ಕೆ ಪಿ.ಎಚ್.ಡಿ ಪದವಿ ಪಡೆದುಕೊಂಡರು. ಕಾಮತ್ ಅವರು ಹಿನ್ನಡವಳಿಕೆಯನ್ನು ಹಚ್ಚಿಕೊಂಡಿದ್ದರು, ನೆಚ್ಚಿಕೊಂಡಿದ್ದರು ಮತ್ತು ಕರ‍್ನಾಟಕದ ಹಿನ್ನಡವಳಿಯ ಬಗ್ಗೆ ಆಳದ ಅರಿವನ್ನು ಹೊಂದಿದ್ದರು.

ತಮ್ಮ ಬಾಳಿನ ಹೆಚ್ಚು ಸಮಯವನ್ನು ಹಿನ್ನಡವಳಿಯ ಅರಕೆಯಲ್ಲಿ ತೊಡಗಿಸಿಕೊಂಡಿದ್ದವರು ಡಾ. ಕಾಮತ್. 1981 ರಿಂದ 1983ರ ವರೆಗೆ ಕರ‍್ನಾಟಕ ರಾಜ್ಯ ಹಳೆಕಲೆತಗಳ (archive) ಮೇಲುಗರಾಗಿ ಆಯ್ಕೆಯಾಗಿದ್ದರು. 1981 ರಿಂದ 1995 ಕರ‍್ನಾಟಕ ಸ್ಟೇಟ್ ಗೆಜೆಟಿಯರ್ ನ ಮೇಲಣಿಗಾರರಾಗಿದ್ದರು(chief editor) ಹಾಗು ಕರ‍್ನಾಟಕ ಡಿಸ್ಟ್ರಿಕ್ಟ್ ಗೆಜೆಟಿಯರ್ ನ ಮೇಲಣಿಗಾರರಾಗಿಯೂ ಕೆಲಸ ಮಾಡಿದ್ದರು. ಕಾಮತ್ ಅವರು ಕರ‍್ನಾಟಕ ಗೆಜೆಟಿಯರ್ ಕಮಿಟಿಯ ಸಲಹೆಗಾರರಾಲ್ಲಿ ಒಬ್ಬರಾಗಿದ್ದರು ಕೂಡ. ಮಿತಿಕ್ ಸೊಸೈಟಿಯ (Mythic society) ಮೂರ‍್ತಿಂಗಳ ಹೊತ್ತಿಗೆ(quarterly journal)ಯ ಅಣಿಗಾರರಾಗಿ ಕೆಲಸ ಮಾಡಿದ್ದರು. ಕರ‍್ನಾಟಕದ ಹಿನ್ನಡವಳಿ ಮತ್ತು ಹಿರಿಮೆಯನ್ನು ಸಾರಲು 1985 ರಲ್ಲಿ ಜಿ.ಎಸ್ ದೀಕ್ಶಿತ್ ಅವರ ಜೊತೆ ಸೇರಿ ‘ಕರ‍್ನಾಟಕ ಇತಿಹಾಸ ಅಕಾಡೆಮಿ‘ಯನ್ನು ಹುಟ್ಟುಹಾಕಿದರು. ಇತಿಹಾಸ ಅಕಾಡೆಮಿಯು ಕರ‍್ನಾಟಕದ ಹಲವೆಡೆ ಹಿನ್ನಡವಳಿ ಬಗೆಗಿನ ಹಮ್ಮುಗೆಯನ್ನು ಒಂದೊಂದು ವರುಶವು ಹಮ್ಮಿಕೊಳ್ಳುತ್ತದೆ. ಇವರು ಕಟ್ಟಿದ ಇತಿಹಾಸ ಅಕಾಡೆಮಿಯು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.

1971 ರಿಂದ ಈವರೆಗೆ ಅವರು ಮಿತಿಕ್ ಸೊಸೈಟಿಯ ಸದಸ್ಯರಾಗಿದ್ದರು ಮತ್ತು 1993ರಲ್ಲಿ ಅದರ ಮೇಲುಗರಾಗಿ ಆಯ್ಕೆಯಾದ ಮೇಲೆ ಮಿತಿಕ್ ಸೊಸೈಟಿಗೆ ಹಲವಾರು ಒಳಿತಿನ ಕೆಲಸವನ್ನು ಮಾಡಿದರು. ಕಾಮತ್ ಅವರು ಕೆಲವು ಹೊತ್ತು ಮುಂಬೈ ನ ಪ್ರೀಪ್ರೇಸ್ ಜರ‍್ನಲ್ ಹೊತ್ತಗೆಯಲ್ಲಿ ಹಾಗು ಪ್ರಜಾವಾಣಿಯಲ್ಲಿ ಕೆಲಸಮಾಡಿದ್ದರು. 2010-11ರಲ್ಲಿ ವಿಜಯಕರ‍್ನಾಟಕದ ಅಂಕಣಕಾರರಾಗಿದ್ದರು. ಕಾಮತ್ ಅವರು ಕನ್ನಡ ಮತ್ತು ಇಂಗ್ಲಿಶಿನಲ್ಲಿ ನಿರರ‍್ಗಳವಾಗಿ ಹಿನ್ನಡವಳಿಯ ಸಂಗತಿಗಳನ್ನು ಬರೆಯುವವರಾಗಿದ್ದರು. ಇತಿಹಾಸ ಅಕಾಡೆಮಿಯ ಮೂಲಕ ಪಿ.ಯು.ಸಿ ಕಲಿಕೆಯ ಹೊತ್ತಗೆಗೆ ಹಲವಾರು ಹಿನ್ನಡವಳಿಯ ಸಂಗತಿಗಳನ್ನು ಸೇರಿಸಿದರು. ಕಾಮತ್ ಅವರು ಹಲವಾರು ಹಿನ್ನಡವಳಿಯ ಹೊತ್ತಗೆಗಳು, ಬಾಳಹೊತ್ತಗೆಗಳನ್ನು (autobiographies) ಬರೆದಿದ್ದರು ಹಾಗು ಹೊತ್ತಗೆಗಳ ನುಡಿಮಾರ‍್ಪು ಕೆಲಸವನ್ನು ಮಾಡಿದ್ದರು.

ಕಾಮತ್ ಅವರ ಹೊತ್ತಗೆಗಳು:

Kamath_Hottage

– ‘ಹಿಂದುರುಗಿ ನೋಡಿದಾಗ’ ಹೊತ್ತಗೆ ಅವರ ಬಾಳಹೊತ್ತಗೆಯೂ ಹೌದು.

ಡಾ. ಸೂರ‍್ಯನಾತ ಕಾಮತ್ ಅವರು ಹಿನ್ನಡವಳಿ ಬಗೆಗಿನ ಕೆಲಸಗಳಿಗೆ ಹಲವಾರು ಮೆಚ್ಚುಗೆ ಮತ್ತು ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ, ಅವುಗಳು ಈ ಕೆಳಗಿನಂತಿವೆ.

  • ಕರ‍್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಕರ‍್ನಾಟಕ ತುಳು ಸಾಹಿತ್ಯ ಪ್ರಶಸ್ತಿ
  • ಚುಂಚಶ್ರೀ ಪ್ರಶಸ್ತಿ
  • ಚಿದಾನಂದ ಪ್ರಶಸ್ತಿ
  • ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ
  • ಬೆಂಗಳೂರು ವಿಶ್ವವಿದ್ಯಾನಿಲಯದ ಸಂಶೋದನಾ ಬಹುಮಾನ

ಡಾ. ಸೂರ‍್ಯನಾತ ಕಾಮತ್ ಅವರು 21 ಅಕ್ಟೋಬರ್ 2015ರ ಬುದವಾರದಂದು ಬೆಂಗಳೂರಿನಲ್ಲಿ ನಮ್ಮನ್ನಗಲಿದರು, ಅವರಿಗೆ 78 ವರುಶ ವಯಸ್ಸಾಗಿತ್ತು. ಅವರ ಹಿನ್ನಡವಳಿ ಬಗೆಗಿನ ಕೆಲಸಗಳು ಮತ್ತು ಅರಕೆಗಳು ನಮ್ಮ ಹೊಸಪೀಳಿಗೆಗೆ ಮಾದರಿಯಾಗಲಿ. ಅವರ ಕರ‍್ನಾಟಕದ ಹಿನ್ನಡವಳಿ ಬಗೆಗಿನ ಅರಕೆಗಳ ಕೊಡುಗೆ ಹೆಮ್ಮೆ ತರುವಂತದ್ದು. ಕಾಮತ್ ಅವರನ್ನು ನಡೆದಾಡುವ ಹಿನ್ನಡವಳಿಯ ಎನ್ಸೈಕ್ಲೋಪಿಡಿಯಾ(History Encyclopedia) ಎಂದರೆ ತಪ್ಪಾಗಲಾರದು.

(ಮಾಹಿತಿಸೆಲೆ: vijayakarnataka.com, karnatakahistory.com, kamat.com, wikipedia)
(ಚಿತ್ರಸೆಲೆ: kamat.com)

 Categories: ನಾಡು

ಟ್ಯಾಗ್ ಗಳು:, , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s