ಹೇ ಸಿಟ್ಟೇ, ನೀನೆಶ್ಟು ಬಯಂಕರ

 ಪ್ರತಿಬಾ ಶ್ರೀನಿವಾಸ್.

angry-demon

ಸಿಟ್ಟೆಂಬ ಸವಿಯ ಸವಿಯದವರಾರು?
ಹೇ ಸಿಟ್ಟೇ, ನೀನೆಶ್ಟು ಬಯಂಕರ
ಯಾಕೋ ಏನೋ ನಾ ನನ್ನೊಳಗಿಲ್ಲ
ಸಿಟ್ಟೆಂಬ ಸಿಡಿಲು ಬಡಿದಾಗಿನಿಂದ

ನೀ ನನ್ನೊಳು ಬರಲು ಕಾರಣವೇನು
ನನ್ನ ಶಿಕ್ಶಿಸಲು ನೀ ಯಾರು?
ಶಾಂತತೆಯ ಹಾಲಗಡಲಲ್ಲಿ ನಾ ಮುಳುಗಿದ್ದೆ
ಅದಕ್ಕೆ ಹುಳಿ ಹಿಂಡಲು ನೀ ಬಂದೆ

ನೀ ನನ್ನೊಳಗೆ ಬಂದೊಡನೆ
ನನ್ನವರ ದೂರ ಮಾಡಿದೆ
ಮೂಗುತಿಯ ದರಿಸುವ ಬದಲು
ಮೂಗ ತುದಿಗೆ ಸಿಟ್ಟ ಅಲಂಕರಿಸಿದೆ

ಸಿಟ್ಟಿಂದ ಒಂದಿಶ್ಟು ಪೆಟ್ಟನ್ನು ತಿಂದೆ
ಹಾಗೊಮ್ಮೆ ಹೀಗೊಮ್ಮೆ ಕಣ್ಣೀರಲ್ಲಿ ಮಿಂದೆ
ನೀ ಹೋಗಬೇಕು ಈ ದೇಹದಿಂದ
ನಾ ಸಿಟ್ಟಲ್ಲಿ ಸಿಡಿಯುವ ಮುನ್ನ

ಸಿಟ್ಟಲ್ಲಿ ಬದುಕ ನಡೆಸಿದರೆ
ಕಶ್ಟಗಳಿಗೆ ದಾರಿ
ಮನುಶ್ಯನಿಗೆ ತಾಳ್ಮೆಯೊಂದಿದ್ದರೆ
ಸುಂದರ ಬದುಕಿಗೆ ಸಹಕಾರಿ

( ಚಿತ್ರಸೆಲೆ: sketchite.com )

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications