ಮಾಡಿನೋಡಿ ಈ ರುಚಿಯಾದ ಬಾಡೂಟ

– ಮದು ಜಯಪ್ರಕಾಶ್.

motte eeli

ಬೇಕಾಗುವ ಸಾಮಾನುಗಳು:

1/4 ಕೆ.ಜಿ ಈಲಿ (liver)
2-3 ಮೊಟ್ಟೆ
2-3 ಹಸಿಮೆಣಸಿನಕಾಯಿ
2 ಈರುಳ್ಳಿ
1 ಹಿಡಿ ಮೆಂತ್ಯ ಸೊಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಶ್ಟು
ಸ್ವಲ್ಪ ಅರಿಶಿಣ

ಮಸಾಲೆ ರುಬ್ಬಿಕೊಳ್ಳವುದು:
1 ಬೆಳ್ಳುಳ್ಳಿ, 2 ಇಂಚು ಶುಂಟಿ, ಸ್ವಲ್ಪ ಕೊತ್ತಂಬರಿ ಸೊಪ್ಪು, 1/2 ಚಮಚ ಚಕ್ಕೆ ಲವಂಗ ಪುಡಿ, 1/4 ಚಮಚ ಮೆಣಸಿನ ಪುಡಿ, ಚಿಟಿಕೆ ಅರಿಶಿಣ ಪುಡಿ ಮತ್ತು ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ.

ಪ್ರೈ ಮಾಡುವ ವಿದಾನ:
ಬಾಣಲೆಯಲ್ಲಿ 4-5 ಚಮಚ ಎಣ್ಣೆ ಹಾಕಿ, ಉದ್ದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ, ಅವು ಸುಮಾರು 1 ನಿಮಿಶ ಬೇಯುವವರೆಗೂ ಹುರಿದು ಬಳಿಕ ಚಿಟಿಕೆ ಅರಿಶಿಣ ಹಾಕಿ, ಹೆಚ್ಚಿದ ಮೆಂತ್ಯ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ನಂತರ, 1/2 ಇಂಚಿನ ತುಂಡುಗಾಳಗಿ ಕತ್ತರಿಸಿದ ಈಲಿ ತುಂಡುಗಳನ್ನು ಬಾಣಲೆಗೆ ಹಾಕಿ ಈಲಿ ಬಣ್ಣ ಬದಲಾಗಿ, ವಾಸನೆ ಹೋಗುವವರೆಗೂ ಹುರಿಯಿರಿ. ನಂತರ ಅದಕ್ಕೆ ರುಬ್ಬಿದ ಮಸಾಲೆ ಮತ್ತು ಉಪ್ಪನ್ನು ಹಾಕಿ ಸುಮಾರು 3 ನಿಮಿಶಗಳ ಕಾಲ ಚೆನ್ನಾಗಿ ಹುರಿಯಿರಿ (ಮಸಾಲೆ ಈಲಿ ತುಂಡುಗಳಿಗೆ ಅಂಟಿಕೊಳ್ಳುವವರೆಗೆ ಹುರಿಯಬೇಕು). ಈಲಿ ಬೆಂದ ಮೇಲೆ ಬಾಣಲೆಗೆ 2-3 ಮೊಟ್ಟೆಗಳನ್ನು ಒಡೆದು ಹಾಕಿ ಸುಮಾರು 2 ನಿಮಿಶಗಳ ಕಾಲ ಚೆನ್ನಾಗಿ ಹುರಿಯಿರಿ. ಅಶ್ಟೆ. ಬಿಸಿ ಬಿಸಿ ಮೊಟ್ಟಿ-ಈಲಿ ಪ್ರೈ ರೆಡಿ. ರೊಟ್ಟಿ ಅತವಾ ಚಪಾತಿಯೊಂದಿಗೆ ನಂಚಿಕೊಂಡು ತಿನ್ನಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: