ಪುಟಾಣಿಗಳ ಚಳುವಳಿ

– ಚಂದ್ರಗೌಡ ಕುಲಕರ‍್ಣಿ.

Babies-Protest
ಬೆಂಗಳೂರಿನ ಮೆಜೆಸ್ಟಿಕನಲ್ಲಿ
ಗದ್ದಲ ನಡೆದಿತ್ತು
ಮಕ್ಕಳ ಬಳಗ ರಾಸ್ತಾ ರೋಕೋ
ಚಳುವಳಿ ಹೂಡಿತ್ತು

ಡೈಪರ ಚಡ್ಡಿ ಯಾತನೆ ಗೋಳನು
ಸಾರಿಸಾರಿ ಹೇಳತಿತ್ತು
ತೊಡೆಗಳ ಸಂದಿ ಪಡಿಪಾಟಲನ್ನು
ಬಿಚ್ಚಿ ಬಿಚ್ಚಿ ಇಡುತಿತ್ತು

ಸರಕಾರ ಕಂಪನಿ ತಂದೆ ತಾಯಿಗೆ
ದಿಕ್ಕಾರ ಹೇಳತಿತ್ತು
ಮಕ್ಕಳ ಹಕ್ಕಿನ ಪಾಟವ ನೆನಪಿಸಿ
ಯುದ್ದವ ಸಾರಿತ್ತು

“ಡೈಪರ ಕಂಪನಿ ಮಾರಾಟವನ್ನು
ತಕ್ಶಣ ನಿಲ್ಲಿಸಲಿ
ಮಾದ್ಯಮದವರು ತುರ‍್ತು ಸುದ್ದಿಯ
ಬೇಗನೆ ಪಸರಿಸಲಿ
ಇದ್ದ ಸರಕನು ಈಗಿಂದ ಈಗಲೇ
ಸುಟ್ಟು ಹಾಕಿಸಲಿ
ನಿಂತ ಕಾಲಮೇಲೆ ನಮ್ಮಯ ಗೋಳಿಗೆ
ಮುಕ್ತಿಯ ಕಾಣಿಸಲಿ”
– ಎನ್ನುವ ಮಕ್ಕಳ ಯುಕ್ತಿಯ ಕಂಡು
ಜನತೆಯು ಬೆಚ್ಚಿತು

ಪುಟಾಣಿ ಪುಟ್ಟರ ನಿತ್ಯದ ಗೋಳಿನ
ನಿಜವನು ಅರಿಯಿತು

(ಚಿತ್ರ ಸೆಲೆ: jollypeople.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: