ನಿಂಬೆಹಣ್ಣಿನ ಉಪ್ಪಿನಕಾಯಿ

ಕಲ್ಪನಾ ಹೆಗಡೆ.

 

ಬೇಕಾಗುವ ಪದಾರ‍್ತಗಳು

1. 10 ನಿಂಬೆ ಹಣ್ಣು
2. 8 ಹಸಿಮೆಣಸಿನಕಾಯಿ
3. 1 ಚಮಚ ಮೆಂತ್ಯ
4. 1 ಚಮಚ ಸಾಸಿವೆ
5. 1 ಚಮಚ ಜೀರಿಗೆ
6. 1 ಚಮಚ ಓಂಕಾಳು
7. ಅರ‍್ದ ಚಮಚ ಇಂಗು
8. 5 ಚಮಚ ಎಣ್ಣೆ
9. ಉಪ್ಪು

ಮಾಡುವ ವಿದಾನ:

ಮೊದಲು ನಿಂಬೆಹಣ್ಣನ್ನು ಚೆನ್ನಾಗಿ ತೊಳೆದು ಬಟ್ಟೆಯಿಂದ ಒರೆಸಿ ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ. ಹೋಳುಗಳಿಗೆ ಉಪ್ಪನ್ನು ಹಾಕಿ 10 ದಿನಗಳ ಕಾಲ ಒಂದು ಪಾತ್ರೆಯಲ್ಲಿ ಹಾಕಿ ನೀರನ್ನು ತಾಗಿಸದೆ ಇಟ್ಟುಕೊಳ್ಳಿ. ಆಮೇಲೆ ಹಸಿಮೆಣಸಿನಕಾಯಿಯನ್ನು ಬಾಣಲೆಗೆ ಹಾಕಿ ಹುರಿದುಕೊಂಡು ಮಿಕ್ಸಿಯಲ್ಲಿ ರುಬ್ಬಿ ನಿಂಬೆಹಣ್ಣಿನ ಹೋಳುಗಳಿಗೆ ಹಾಕಿ. ಬಳಿಕ ಮೆಂತ್ಯ, ಜೀರಿಗೆ, ಓಂಕಾಳನ್ನು ಬಾಣಲೆಯಲ್ಲಿ ಹುರಿದು ಪುಡಿ ಮಾಡಿ ನಿಂಬೆಹಣ್ಣಿನ ಹೋಳುಗಳಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಆನಂತರ ಬಾಣಲೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾದ ಬಳಿಕ ಇಂಗು, ಸಾಸಿವೆಯನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಸೌಟಿನಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.  ಊಟದ ಜೊತೆಗೆ ಅತವಾ ಚಪಾತಿ, ದೋಸೆ ಜೊತೆಗೆ ನಂಜಿಕೊಳ್ಳಲು ಹಾಕಿ ಕೊಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: