ಮತ್ತೇಕೆ ಬಂದೆ ನೀನು

– ಸುರಬಿ ಲತಾ.

ಹ್ರುದಯ ಬಾಗಿಲು ಬಡಿದು
ತೆಗೆಯುವ ಮೊದಲೇ
ಮರೆಯಾದವನು
ಮತ್ತೇಕೆ ಬಂದು ಕೆಣಕುವೆ ಮನವನ್ನು

ಕನಸ ತೋರಿಸಿ
ಕಲ್ಪನೆಗಳಿಗೆ ರೆಕ್ಕೆ ಬರಿಸಿದವನು
ನನಸಾಗುವ ಮುನ್ನ ಕರಗಿ ಹೋದವನು
ಮತ್ತೇಕೆ ಬಂದೆ ನೀನು

ಕಣ್ಣಲ್ಲಿ ಕಣ್ಣು ಬೆರೆಸಿ
ಆಸೆಯ ದೀಪ ಬೆಳಗಿಸಿ
ಬೆಳಕು ಹರಿಯುವ ಮೊದಲೇ ಕತ್ತಲಲ್ಲಿ ಮರೆಯಾದವನು
ಮತ್ತೇಕೆ ಬಂದೆ ನೀನು

ಪದಗಳ ಸರ ಮಾಲೆ ಮಾಡಿ
ಪದ್ಯವಾಗಿಸಿದವನು
ಮದುರ ರಾಗವಾಗುವ ಮೊದಲೇ ಮುನ್ನುಡಿ ಹರಿದವನು
ಮತ್ತೇಕೆ ಬಂದೆ ನೀನು

ಮನದ ಬಯಕೆ ತೀರದೇ
ಕಣ್ಣು ಹುಡುಕಾಟವ ಮರೆಯಲು ಕಾದಿದೆ
ಮತ್ತೆ ಬಂದು ಕಣ್ಣೀರು ತರಿಸದಿರು ನೀನು
ನಿನ್ನ ಮರೆಯಲು ಹೊರಟಿರುವೆ ನಾನು

ಹೇಳಿಬಿಡು ವಿದಾಯ
ಬರೆನು ಇನ್ನು ಸನಿಹ
ಬರಿದಾಯಿತು ಹ್ರುದಯ
ಶುಬಂ ಒಂದೇ ಬಾಕಿ ಇನಿಯ

( ಚಿತ್ರ ಸೆಲೆ: theguardian.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: