ತಣ್ಣಗಿರಲಿ ತವರು ನಂದು
– ಸುರಬಿ ಲತಾ.
ನಾಗರ ಪಂಚಮಿ ಬಂತು
ನಾಗರ ದರುಶನ ಆಯಿತು
ಸೋದರನ ಬೆನ್ನು ತೊಳೆದರು
ತಂಪಾಗಿಸಿಕೊಂಡರು ವರುಶದ ನೋವನ್ನು
ಎಲ್ಲರೂ ಆನಂದದಲಿ
ನಾ ನೊಂದೆ ಮನದಲಿ
ಇಂದೇಕೆ ಕಾಡಿತು ನನ್ನಲ್ಲಿ
ನಿರಾಸೆಯು ಎದೆಯಲ್ಲಿ
ಬರಲಿಲ್ಲ ನನ್ನಣ್ಣ ಬರಲಿಲ್ಲ
ಹೊಸಿಲಲಿ ನಿಂತು ನೋಡಿದೆ
ಕಣ್ಣ ಅರಳಿಸಿ ಕಾದು ಕೂತೆ
ಮುಗಿಲಲಿ ಸೂರ‍್ಯ
ನೆತ್ತಿಯ ಸುಡುತಲಿದ್ದ
ಬರಲಿಲ್ಲ ನನ್ನಣ್ಣ ಬರಲಿಲ್ಲ
ಅಳಲಾಗದೆ ಗಂಟಲು ಉರಿತ
ನಗುವ ತುಟಿಗಳಿಂದು ಬಿಗಿತ
ದೇವರಿಂದು ಎಲ್ಲವೂ ಕೊಟ್ಟು
ಅಣ್ಣನ ಒಲವು ಕೊಡಲು ಮರೆತ
ಬರಲಿಲ್ಲ ನನ್ನಣ್ಣ ಬರಲಿಲ್ಲ
ಕೋರುವೆ ಆ ದೇವನ ಇಂದು
ತಣ್ಣಗಿರಲಿ ತವರು ನಂದು
ಕಶ್ಟಗಳ ಕೊರತೆ ನನಗಿರಲಿ
ಅಣ್ಣ ನಗುತ ಎಂದೂ ಬಾಳಲಿ
ಬರದಿದ್ದರೂ ನೀನು ನೆನೆಯುವೆ ನಾನು
(ಚಿತ್ರ ಸೆಲೆ: propelsteps.files.wordpress.com )
ಇತ್ತೀಚಿನ ಅನಿಸಿಕೆಗಳು