ಮಕ್ಕಳ ಕವಿತೆ: ಆನೆ ಚಿಕ್ಕದಾಗಿ ಬಿಟ್ರೆ…
ಆನೆ ಬಾಳ ಚಿಕ್ಕದಾಗಿ
ಇರುವೆಯಾಗಿ ಬಿಟ್ರೆ
ಒಂದೆ ಹಳಕು ಸಕ್ರೆ ಸಾಕು
ಊಟಕ್ಕಂತ ಕೊಟ್ರೆ
ಸೂಜಿಗಿಂತ ಚಿಕ್ಕದು ಬೇಕು
ಅಂಕುಶ ಮಾವುತಂಗೆ
ಹೇಳಿದಂಗ ಕೇಳಿಸಬಹುದು
ಅತ್ತಿತ್ತ ಓಡದಂಗೆ
ದಾರದೆಳೆಯಶ್ಟ ಕಾಣ್ಬಹುದಾಗ
ಚಿಕ್ಕ ಆನೆ ಸೊಂಡ್ಲು
ಎಳ್ಳಕಾಳಿನಶ್ಟ ಮಿಟಾಯಿ ಚೂರು
ಕೊಡಬಹುದದಕೆ ತಿನ್ಲು
ಕಬ್ಬಿನ ಗಣಿಕೆ ಮುರದ ತಿನಲಿಕ್ಕೆ
ಬರದು ನೋಡು ಆಗ
ಚೂರ್ ಚೂರ್ ಬೆಲ್ಲ ತಿಂದುತಿಂದು
ಬಿಡಬಹುದು ದೊಡ್ಡ ತೇಗ
ಎಂತ ಮಕ್ಳು ಹತ್ತಿ ಕೂಡ್ ಬೇಕ
ಪುಟಾಣಿ ಆನೆ ಮ್ಯಾಲ
ಕೂದಲೆಳೆಯಶ್ಟ ಚಿಕ್ಕದಿರಬೇಕ
ಎರಡೂ ಕೈಯಿ ಕಾಲ
ಇಂತ ಮಕ್ಳ ಶಾಲೆ ಆಗ
ಒಂದು ಎರಡೇ ಇಂಚು
ಸಾಸಿವೆ ಕಾಳಶ್ಟ ಎತ್ತರಿರತಾವು
ಕೂತುಕೊಳ್ಳುವ ಬೆಂಚು
(ಚಿತ್ರ ಸೆಲೆ: pixabay.com)
ಮಕ್ಕಳ ಕವಿತೆಗೆ ತೊಡಗಿರುವ ಬರಹಗಾರರು ನಿಜುಕು ಸಂತೋಷ ಯಾಕೆಂದರೆ ಮಕ್ಕಳ ಕುರಿತು ಕಾವ್ಯ ಕಟ್ಟುವಲ್ಲಿ ಅ ಮಕ್ಕಳ ಭಾವನೆಗಳಲಿ ನಾವು ಆಳವಾಗಿ ಇಳಿದು ಅಧ್ಯಾಯಾನ ಮಾಡಬೇಕು ಹೀಗಾಗಿ ಮಕ್ಕಳ ಸಾಹಿತ್ಯಕ್ಕಿಂತ ಬೇರೆ ಯಾವ ಸಾಹಿತ್ಯವು ಸಹ ಮಿಗಿಲಾದದ್ದು ಇಲ್ಲ ಯಾಕೆಂದರೆ ನಾವು ಸಹ ಮಕ್ಕಳ ಕವಿತೆಗಳು ಬರಿಯುವಿಕೆಗೆ ತೊಡಗಿದ್ದೆವೆ,,,ನಿಮ್ಮ ಈ ಆನೆಯ ಕವಿತೆ ಬಹಳ ಲಯಧಾಟಿ ಇದೆ,,,,,ಶಿವಶಂಕರ ಕಡದಿನ್ನಿ
ಅನಿಸಿಕೆ ಚೆಂದ ಅಯ್ತೆ