ಕೊಬ್ಬರಿ ಹೋಳಿಗೆ

– ಸವಿತಾ.

ಕೊಬ್ಬರಿ ಹೋಳಿಗೆ, Coconut holige

ಏನೇನು ಬೇಕು?

  • ಹಸಿ ಕೊಬ್ಬರಿ ತುರಿ – 1 ಬಟ್ಟಲು
  • ಬೆಲ್ಲದ ಪುಡಿ – 1/2 ಬಟ್ಟಲು
  • ಗಸಗಸೆ – 1 ಚಮಚ
  • ಲವಂಗ – 2
  • ಜಾಯಿಕಾಯಿ ಪುಡಿ – 1/4 ಬಾಗ
  • ಗೋದಿ ಹಿಟ್ಟು – 1/2 ಬಟ್ಟಲು
  • ಮೈದಾ ಹಿಟ್ಟು – 1/2 ಬಟ್ಟಲು
  • ಚಿರೋಟಿ ರವೆ – 1 ಚಮಚ
  • (4)ಏಲಕ್ಕಿ ಪುಡಿ
  • ಸಲ್ಪ ಉಪ್ಪು (ಬೇಕಾದಲ್ಲಿ)

ಮಾಡುವ ಬಗೆ:

  • ಗೋದಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ, ಸ್ವಲ್ಪ ಕಾದ ಎಣ್ಣೆ ಮತ್ತು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಒಂದು ಅತವಾ ಎರಡು ಗಂಟೆ ಇಡಿ.
  • ಹಸಿ ಕೊಬ್ಬರಿ ತುರಿ ಮತ್ತು ಬೆಲ್ಲವನ್ನು ಕಾಯಿಸಲು ಒಲೆಯ ಮೇಲಿಟ್ಟು, ಸ್ವಲ್ಪ ಹೊತ್ತು ಕೈಯಾಡಿಸಿ.
  • ಬೆಲ್ಲ ಕರಗಿಸಿ, ಕೊಬ್ಬರಿ-ಬೆಲ್ಲದ ಮಿಶ್ರಣವನ್ನು ಸ್ವಲ್ಪ ಗಟ್ಟಿ ಮಾಡಿ ಇಟ್ಟುಕೊಳ್ಳಿ.
  • ಕೊಬ್ಬರಿ-ಬೆಲ್ಲದ ಮಿಶ್ರಣವನ್ನು ಸ್ವಲ್ಪ ಹೊತ್ತು ಆರಲು ಬಿಡಿ.
  • ಏಲಕ್ಕಿ, ಲವಂಗ, ಜಾಯಿಕಾಯಿ ಪುಡಿ ಮಾಡಿ ಹಾಕಿ.
  • ಗಸಗಸೆ ಉದುರಿಸಿ ಇನ್ನೊಮ್ಮೆ ಚೆನ್ನಾಗಿ ಕಲಸಿ ಹೂರಣದ ಉಂಡೆ ತಯಾರಿಸಿ ಇಟ್ಟುಕೊಳ್ಳಿ.
  • ನಂತರ ಕಣಕದ ಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ಕಲಸಿ 
  • ನಿಂಬೆ ಹಣ್ಣು ಗಾತ್ರದಶ್ಟು ಹಿಟ್ಟನ್ನು ತೆಗೆದುಕೊಂಡು, ಅದನ್ನು ಸ್ವಲ್ಪ ಲಟ್ಟಿಸಿ ಕೊಬ್ಬರಿ ಹೂರಣ ತುಂಬಿ
  • ಮಣೆ ಮೇಲೆ ಒಂದು ಪ್ಲಾಸ್ಟಿಕ್ ಹಾಳೆಯ ಇಟ್ಟು, ಎಣ್ಣೆ ಹಚ್ಚಿ ಲಟ್ಟಿಸಿರಿ.
  • ಬಿಸಿ ತವೆಯ ಮೇಲೆ ಸ್ವಲ್ಪ ಎಣ್ಣೆ ಹಾಕಿ, ಎರಡೂ ಬದಿ ಬೇಯಿಸಿರಿ.

ಈಗ ಬಿಸಿಯಾದ ಕೊಬ್ಬರಿ ಹೋಳಿಗೆ ತಿನ್ನಲು ಸಿದ್ದ. ತುಪ್ಪದ ಜೊತೆ ಕೊಬ್ಬರಿ ಹೋಳಿಗೆಯನ್ನು ಸವಿಯಿರಿ.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: