ಬೂಂದಿ ಲಾಡು

– ಸವಿತಾ.

ಬೂಂದಿ ಲಾಡು, Boondi Ladu

ಏನೇನು ಬೇಕು?

  • ಬೂಂದಿ ಕಾಳು – 1/4 ಕಿಲೋ
  • ಸಕ್ಕರೆ – 1/4 ಕಿಲೋ
  • ತುಪ್ಪ – 2 ಚಮಚ
  • ಪುಟಾಣಿ ಅತವಾ ಹುರಿಗಡಲೆ ಹಿಟ್ಟು – 3 ಚಮಚ
  • ಒಣ ದ್ರಾಕ್ಶಿ, ಗೋಡಂಬಿ, ಏಲಕ್ಕಿ
  • ಲವಂಗ ಪುಡಿ
ಮಾಡುವ ಬಗೆ
  • ಬೂಂದಿ ಕಾಳು, ಕಡಲೆ ಹಿಟ್ಟು ಮತ್ತು ನೀರು ಸೇರಿಸಿ ಮೀಡಿಯಂ ಹದಕ್ಕೆ ಕಲಸಿಕೊಳ್ಳಿ.
  • ಎಣ್ಣೆ ಕಾಯಿಸಿ, ಜಾಲಿ ಸೌಟು ಮೇಲೆ ಕಡಲೆ ಹಿಟ್ಟು ಸವರಿ ಎಣ್ಣೆಯಲ್ಲಿ ಬೂಂದಿ ಕಾಳು ಕರಿದು ತೆಗೆಯಿರಿ.
  • ಸಕ್ಕರೆ ಒಲೆಯ ಮೇಲಿಟ್ಟು ಒಂದೆಳೆ ಪಾಕ ಮಾಡಿ ಇಟ್ಟುಕೊಳ್ಳಿ.
  • ಎರಡು ಚಮಚ ತುಪ್ಪ ಹಾಕಿ ಮತ್ತು ಹುರಿಗಡಲೆ ಹಿಟ್ಟು ಹಾಕಿ.
  • ಆರಿದ ನಂತರ ಬೂಂದಿ ಕಾಳು ಹಾಕಿ ಮತ್ತು ಏಲಕ್ಕಿ, ಲವಂಗ ಪುಡಿ ಹಾಕಿ.
  • ಉಂಡೆ ಕಟ್ಟುವಾಗ ಒಣ ದ್ರಾಕ್ಶಿ, ಗೋಡಂಬಿ ಸೇರಿಸಿ ಕಟ್ಟಿರಿ
ರುಚಿಯಾದ ಬೂಂದಿ ಲಾಡು ಸವಿಯಿರಿ 🙂

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: