ಕರುನಾಡ ವೈಬವ

– ಶಾಂತ್ ಸಂಪಿಗೆ.

ಕನ್ನಡನಾಡು, ಕನ್ನಡ, Kannada, Karnataka

ಕನ್ನಡ ನಾಡಿನ ಪುಣ್ಯದ ಮಡಿಲಲಿ
ಜನಿಸಿದ ಮಕ್ಕಳು ನಾವೆಲ್ಲ
ಸುಂದರ ನಾಡಿನ ಸ್ರುಶ್ಟಿಯಲಿ ಹುಟ್ಟಿದ
ಹೆಮ್ಮೆಯು ಇರಲಿ ನಮಗೆಲ್ಲ

ಬೂಮಂಡಲದಲಿ ಸ್ವರ‍್ಗವ ನಾಚಿಸೋ
ಹಸಿರಿನ ವನಸಿರಿ ಬಯಲಲ್ಲಿ
ಬೋರ‍್ಗರೆಯುವ ನದಿಗಳ ನಾದ
ತುಂಬಿದೆ ಸಂತಸ ಮನದಲ್ಲಿ

ವಿಸ್ಮಯವಾದ ಜೀವರಾಶಿಗಳು
ಕೂಡಿ ಬಾಳುತಿವೆ ವನದಲ್ಲಿ
ರೆಕ್ಕೆಯ ಬಿಚ್ಚಿ ಹಾರಿವೆ ಹಕ್ಕಿ
ಸ್ರುಶ್ಟಿಸಿ ಕಲರವ ಮುಗಿಲಲ್ಲಿ

ಬೆಟ್ಟವ ಹತ್ತಿ ಬೆವರನು ಇಳಿಸಿ
ದುಡಿಯುತ ಬಾಳುವ ಜನರಿಲ್ಲಿ
ಮೋಸ ವಂಚನೆ ಸ್ವಾರ‍್ತವು ಇಲ್ಲ
ಸ್ವರ‍್ಗದಂತಿದೆ ದರೆಯಿಲ್ಲಿ

ಕರುಣೆಯು ತುಂಬಿದ ಜನರಿಲ್ಲಿ
ನಡೆಸುವರಲ್ಲ ಕೈ ಹಿಡಿದು
ಕರುನಾಡಲಿ ನೆಲೆಸಿದ ಶಾಂತಿಯು
ದೊರಕಲಿ ಜಗಕೆಲ್ಲ ಎಂದು

ಸಾದು ಸಂತರು ನಾಡಿಗೆ ನೀಡಿದ
ಗ್ನಾನದ ಬೆಳಕಿದೆ ನಮಗೆಲ್ಲ
ದೈರ‍್ಯ ಸಾಹಸ ಶೌರ‍್ಯಕೆ ಹೆಸರು
ಗಂಡು-ಹೆಣ್ಣೆಂಬ ಬೇದವು ಇಲ್ಲ

ಶಿಲ್ಪ ಕಲೆಗಳು ನ್ರುತ್ಯ ಶಿಲೆಗಳು
ಸಾರಿವೆ ನಾಡಿನ ವೈಬವವ
ಒಂದುಗೂಡಲಿ ಎಲ್ಲ ಕೈಗಳು
ಕಟ್ಟಲು ಹೊಸ ಕರುನಾಡನ್ನ

(ಚಿತ್ರ ಸೆಲೆ: OneIndia Kannada)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: