ಅಪರಂಜಿಯ ಮೌನ

– ಸ್ಪೂರ‍್ತಿ. ಎಂ.

ಅಪರಂಜಿ, ಮೌನ, ಪ್ರಾರ‍್ತನೆ, silence, prayer

ಅಪರಂಜಿ ನಿಮ್ಮಲ್ಲಿ
ಮನವಿ ಮಾಡುವೆನಿಲ್ಲಿ
ನಿಮ್ಮ ಕೋಪ ಪೈಸರಿಸಲಿ
ಎನ್ನ ಮೇಲೆ ಕ್ಶಮೆಯಿರಲಿ

ನಿಮ್ಮ ಒಂದು ಮಾತು
ನನಗೆ ಚೈತನ್ಯ ನೀಡುತಿತ್ತು
ಈಗ ನಿಮ್ಮ ಮೌನ
ಇರಿಯುತ್ತಿದೆ ನನ್ನ ಮನ

ಒಂದು ಮಾತು ಮಾತಾಡಿ
ನನ್ನನ್ನು ಕ್ಶಮಿಸಿಬಿಡಿ
ಮತ್ತೆಂದೂ ಬಂದು ನಾನು
ತೊಂದರೆಯ ನೀಡೆನು

ಇಶ್ಟು ದಿನ ನಿಮ್ಮೊಡನೆ
ನಾನಿದ್ದದ್ದು ನಿಮ್ಮ ಕರುಣೆ
ಬೇಡುವೆ ದೇವರಲ್ಲಿಂದು
ನೀವು ನಗುನಗುತ ಇರಲೆಂದು

(ಪೈಸರಿಸು: ಕುಗ್ಗು, ಕಡಿಮೆಯಾಗು)

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: