ಸವಿನುಡಿ ಕನ್ನಡ ಬೆಡಗಿನ ಸಾಗರ

– ಚಂದ್ರಗೌಡ ಕುಲಕರ‍್ಣಿ.

kannada, karnataka, ಕನ್ನಡ, ಕರ‍್ನಾಟಕ

ಸವಿನುಡಿ ಕನ್ನಡ ಬೆಡಗಿನ ಸಾಗರ
ಪದಗಳ ರತ್ನದ ಹರಳು
ಮನಸು ಮನಸನು ಬೆಸೆದು ಕಟ್ಟಿದ
ತಾಯಿಯ ಹೊಕ್ಕಳ ಕರಳು

ಜೀವಜೀವದ ಲಯದಲಿ ಹಬ್ಬಿದ
ಅಮ್ರುತ ಬಳ್ಳಿಯ ಅರಳು
ಬಾವದ ಬಿತ್ತರ ಚೇದಿಸಿ ಸಾಗುವ
ಹರಿತ ಅಂಚಿನ ಸರಳು

ಸ್ವರಗಳ ಒಡಲಲಿ ಹರಿಯುವ ತೇಜದ
ಬೆಳ್ಳಂಬೆಳಕಿನ ನೆರಳು
ಉಸಿರು ಉಸಿರಲಿ ಕಲರವ ಸೂಸುವ
ಸಾರ‍್ತಕ ಸುಮದುರ ಕೊರಳು

ಗಣಕ ಮೊಬೈಲಲಿ ಮೆರೆದಾಡುವುದು
ಆಡಿಸುತಿದ್ದರೆ ಬೆರಳು
ಹೊಸತನ ತಂದಿದೆ ಕನ್ನಡ
ಮಾತಿಗೆ ತಂತ್ರಗ್ನಾನದ ಹೊರಳು

(ಚಿತ್ರ ಸೆಲೆ: starofmysore.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: