ಆಹಾ ಸೆಟ್ ದೋಸೆ!
– ಕಲ್ಪನಾ ಹೆಗಡೆ.
ಏನೇನು ಬೇಕು?
- ಅಕ್ಕಿ – 3 ಪಾವು
- ಉದ್ದಿನ ಬೇಳೆ – 1 ಪಾವು
- ಕಡ್ಲೆಪುರಿ – 2 ಪಾವು
- ಗಟ್ಟಿ ಅವಲಕ್ಕಿ – 1/2 ಪಾವು
- ಉಪ್ಪು – ರುಚಿಗೆ ತಕ್ಕಶ್ಟು
ಮಾಡೋದು ಹೇಗೆ?
ಮೊದಲು ಅಕ್ಕಿ ಹಾಗೂ ಗಟ್ಟಿ ಅವಲಕ್ಕಿಯನ್ನು ಚೆನ್ನಾಗಿ ತೊಳೆದು, 3 ತಾಸುಗಳ ಕಾಲ ನೀರಿನಲ್ಲಿ ನೆನೆ ಹಾಕಿಕೊಳ್ಳಿ. ಅಕ್ಕಿಯನ್ನು ರುಬ್ಬುವ 10 ನಿಮಿಶಗಳ ಮೊದಲು ಕಡ್ಲೆಪುರಿಯನ್ನು ತೊಳೆದು ಹಾಕಿಕೊಳ್ಳಿ. ಆಮೇಲೆ ಗ್ರೈಂಡರ್‌ನಲ್ಲಿ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ರಾತ್ರಿಯಿಡೀ ಹುದುಗಲು(ferment) ಬಿಡಿ. ಇದನ್ನು ಪ್ರಿಡ್ಜಲ್ಲಿ ಇಡಬೇಡಿ. ಬೆಳಿಗ್ಗೆ ರುಚಿಗೆ ತಕ್ಕಶ್ಟು ಉಪ್ಪು ಹಾಕಿ, ಸೌಟಿನಿಂದ ಮಿಕ್ಸ್ ಮಾಡಿ ಹಿಟ್ಟನ್ನು ಹದ ಮಾಡಿಕೊಳ್ಳಿ.
ಕಾವಲಿಗೆ ಎಣ್ಣೆ ಸವರಿ, ಚೆನ್ನಾಗಿ ಕಾದ ಬಳಿಕ ಸೌಟಿನಿಂದ ದೋಸೆಯನ್ನು ಬಿಡಿ, ಆಮೇಲೆ ಎಣ್ಣೆ ಹಾಕಿ ತಿರುಗಿಸಿ ಬೇಯಿಸಿಕೊಳ್ಳಿ. ಕಾವಲಿಯಲ್ಲಿ ಒಟ್ಟೊಟ್ಟಿಗೇ 2-3 ಸಣ್ಣ-ಸಣ್ಣ ದೋಸೆಗಳನ್ನು ಹಾಕಿಕೊಳ್ಳಬಹುದು. ಕಾವಲಿ ಮೇಲೆ ದೋಸೆ ಹಿಟ್ಟನ್ನು ಹಾಕಿ, ಸೌಟಿನಿಂದ ತುಂಬಾ ಸ್ಪ್ರೆಡ್ ಮಾಡಿಕೊಳ್ಳಬೇಡಿ. ತಯಾರಿಸಿದ ದೋಸೆಯನ್ನು ಕಾಯಿಚಟ್ನಿಯೊಂದಿಗೆ ತಿನ್ನಲು ನೀಡಿ.
(ಚಿತ್ರ ಸೆಲೆ: ಕಲ್ಪನಾ ಹೆಗಡೆ)
ಇತ್ತೀಚಿನ ಅನಿಸಿಕೆಗಳು