ಆರೋಗ್ಯಕರ ಹೆಸರುಕಾಳಿನ ದೋಸೆ

– ಸುಹಾಸಿನಿ ಎಸ್.

ಹೆಸರುಕಾಳು ಪ್ರೊಟೀನ್, ವಿಟಮಿನ್ ಗಳನ್ನು ಹೊಂದಿರುವ ಕಾಳಾಗಿದೆ. ಈ ಕಾಳು ಕಡಿಮೆ ಕೊಬ್ಬು ಉಳ್ಳದ್ದುದರಿಂದ ಶುಗರ್, ಬಿಪಿ, ದಪ್ಪ ಮೈ ಮತ್ತು ಅನೇಕ ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ. ನಿಯಮಿತವಾಗಿ ಮೊಳಕೆ ಕಟ್ಟಿದ ಹೆಸರುಕಾಳನ್ನು ತಿನ್ನುವುದರಿಂದ ನಮ್ಮ ಆರೋಗ್ಯ ವ್ರುದ್ದಿಯಾಗುವುದು. ಈ ಕಾಳಿನಿಂದ ರುಚಿಯಾದ ದೋಸೆಯನ್ನೂ ಮಾಡಬಹುದು.

ಏನೇನು ಬೇಕು?

  • ಹೆಸರುಕಾಳು – 2 ಕಪ್
  • ಮೆಣಸಿನಕಾಯಿ – 4-5
  • ಬೆಳ್ಳುಳ್ಳಿ – 4-5 ಎಸಳು
  • ಜೀರಿಗೆ – 2 ಚಮಚ
  • ಶುಂಟಿ – ಸ್ವಲ್ಪ
  • ಕರಿಬೇವು – ಸ್ವಲ್ಪ
  • ಕೊತ್ತಂಬರಿ – ಸ್ವಲ್ಪ
  • ಅರಿಶಿಣ ಪುಡಿ – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ:

1. ಹೆಸರುಕಾಳನ್ನು ಚೆನ್ನಾಗಿ ತೊಳೆದು ರಾತ್ರಿ ನೆನೆಯಲು ಬಿಡಿ. (ಮೊಳಕೆ ಬಂದ ಹೆಸರುಕಾಳಿನಿಂದಲೂ ದೋಸೆಯನ್ನು ಮಾಡಬಹುದು).
2. ಮಿಕ್ಸಿ ಜಾರ್ ನಲ್ಲಿ ನೆನೆಸಿದ ಹೆಸರುಕಾಳು ಮತ್ತು ಮೇಲೆ ತಿಳಿಸಿದ ಇತರೆ ಸಾಮಗ್ರಿಗಳನ್ನು ಹಾಕಿ, ಸಲ್ಪ ನೀರು ಬೆರೆಸಿ ರುಬ್ಬಿ, ದೋಸೆ ಹಿಟ್ಟಿನ ಹದಕ್ಕೆ ಕಲೆಸಿ.
3. ದೋಸೆ ಹಂಚನ್ನು ಮದ್ಯಮ ಉರಿಯಲ್ಲಿ ಕಾಯಿಸಿ. ಹೆಸರುಕಾಳಿನ ದೋಸೆ ಹಿಟ್ಟನ್ನು ಹಂಚಿಗೆ ಹಾಕಿ, ಮದ್ಯಮ ಉರಿಯಲ್ಲಿ ಎರಡೂ ಬದಿ ಬೇಯಿಸಿ. ಆರೋಗ್ಯಕರ ಹೆಸರುಕಾಳಿನ ದೋಸೆ ಈಗ ತಯಾರು.

ಬಿಸಿ ಬಿಸಿ ದೋಸೆಯನ್ನ ಕೊಬ್ಬರಿ ಚಟ್ನಿ ಮತ್ತು ಅಲೂಗಡ್ಡೆ ಪಲ್ಯ ಅತವಾ ಈರುಳ್ಳಿ ಪಲ್ಯ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: