ಸ್ಮರಣೆಯೊಂದೇ ಸಾಲದು

– ವೀರೇಶ.ಅ.ಲಕ್ಶಾಣಿ.

ಮುದ್ದು ಮೊಗದ ಗೌರಿ

ಮುದ್ದು ಮೊಗದ ಪೆದ್ದು ಗೌರಿ
ಸದ್ದಿಲ್ಲದೆ ಎದ್ದು ಹೋದ ದಿನಗಳ ನೆನೆಸಿ
ಸದ್ದಿಲ್ಲದೆ ಅಳುತ್ತಿತ್ತು ಹ್ರುದಯ
ಅವಳ ಪರಿಶುದ್ದ ನಿಶ್ಕಲ್ಮಶ ಮನಸ ನೆನೆದು

ಅವಳು ದಣಿದ ದಿನಗಳಿಗೆ ಲೆಕ್ಕವಿಲ್ಲ
ದುಡಿದ ಕೈಗಳಿಗೆ ಸಂಬಳವಿಲ್ಲ
ಕಟ್ಟಿದ ಕನಸುಗಳು ನನಸಾಗಲಿಲ್ಲ
ಮೂರು ದಿನದ ಸಂತೆಯ ಬದುಕೂ ದಕ್ಕಲಿಲ್ಲ

ಬಿಕ್ಕಳಿಕೆ ಬಾಯ್ಬಿಡಲಿಲ್ಲ
ಸೊಕ್ಕು ಸಂಪನ್ನತೆ ಮೆರೆಯಿತಲ್ಲ
ಪ್ರೀತಿ – ಮಮತೆಯ ಕಡಲು ಅವಳು
ಹ್ರುದಯ ವೈಶಾಲ್ಯತೆ ಮೆರೆದವಳು

ದುಕ್ಕದಲ್ಲೂ ನಕ್ಕವಳಾಕೆ
ಸೆಟೆಯ ಬದುಕು ಅಟ್ಟಿದಾಕೆ
ದಿಟ್ಟ ನಡೆಯನಿಟ್ಟಾಕೆ
ಮೌನದಾಬರಣ ತೊಟ್ಟಾಕೆ

ಪದ ಸಾಲದ ವ್ಯಕ್ತಿತ್ವದವಳು
ಚಲುವ ಕನಿಯ ಸಾಲಿನವಳು
ಪ್ರೇಮ ದಾನ ಮಾಡಿದವಳು
ಪ್ರೀತಿ ಸಾಲ ಸಂಚಿನವಳು

ಬರಡಾಯಿತು ಜೀವ ಅವಳ ನೆನೆದು
ಕುರುಡಾಯಿತು ಮನಸು ನೆನಪ ಕೆದಕಿ
ಮತ್ತೆ ಜೀವ ತಳೆವ ಕನಸೋಳ್
ಅಡಿಯಿಡುತಿದೆ ಜೀವ ಬೆಳಕನರಸಿ

ಸ್ಮರಣೆಯೊಂದೇ ಸಾಲದು ಅವಳ ಗನತೆ ಮೆರೆಯಲು
ಪದಗಳೆಶ್ಟೂ ಸಾಲವು ಅವಳ ಬದುಕ ಹೊಗಳಲು
ಯಾವ ಪೂಜೆಯೂ ಸರಿಬಾರದು ಅವಳ ನಿತ್ಯ ಜಪಿಸಲು
ಮರುಜನ್ಮವೊಂದೇ ದಾರಿಯು ಅವಳ ಮತ್ತೆ ಪಡೆಯಲು

(ಚಿತ್ರ ಸೆಲೆ: propelsteps.files.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *