ಕವಿತೆ: ವರುಶಗಳೆಶ್ಟು ಉರುಳಿದರೇನು…
ವರುಶಗಳೆಶ್ಟು ಉರುಳಿದರೇನು
ಸಾಗದು ಬೂಮಿ ಸೂರ‍್ಯನ ಬಿಟ್ಟು
ಎಲ್ಲಿಂದೆಲ್ಲಿಗೆ ಸುತ್ತಿದರೇನು
ತಿಳಿವುದೇ ಜೀವದ ನಿಜ ಗುಟ್ಟು!!
ನಿನ್ನೆಯ ನೆನಪು ನಾಳಿನ ಗಂಟು
ನಾಳಿನ ಗಂಟಿಗೆ ಇಂದಿನ ನಂಟು
ನೆನೆದದ್ದೊಂದು ನಡೆಯೋದ್ ಇನ್ನೊಂದು
ಚಿಂತಿಸೋದ್ ಯಾಕೆ ಮತ್ತೇನೆಂದು!!
ಇರೋ ಅಶ್ಟ್ ದಿವಸ
ಮೇಲ್ ನಿಂತ್ ಸುತ್ತು,
ಸತ್ಮೇಲ್ ಮಣ್ಣಾಗ್
ಸೂರ‍್ಯನ್ನೇ ಸುತ್ತು
ಮತ್ತೆ ಹುಟ್ ಬಂದ್ರು ಇಲ್ಲೇ ಸುತ್ತು
ಹೊಸದೇನಿಲ್ಲ ಹಳೇದೆ ಎಲ್ಲ,
ಕೊಟ್ಟೋನ್ ಯಾರೋ
ಕಂಡ್ ಹಿಡಿಯಕ್ ಆಗಲ್ಲ
ವರುಶಗಳೆಶ್ಟು ಉರುಳಿದರೇನು, ಸಾಗದು ಬೂಮಿ ಸೂರ‍್ಯನ ಬಿಟ್ಟು
ಎಲ್ಲಿಂದೆಲ್ಲಿಗೆ ಸುತ್ತಿದರೇನು, ತಿಳಿವುದೇ ಜೀವದ ನಿಜ ಗುಟ್ಟು!!
( ಚಿತ್ರ ಸೆಲೆ: youtube )
thumba chennagide