ಹುರುಳಿ ಸಂಗಟಿ
– ಸವಿತಾ.
ಏನೇನು ಬೇಕು?
1 ಲೋಟ – ಹುರುಳಿ ಹಿಟ್ಟು
1 ಲೋಟ – ಬಾಂಬೆ ರವೆ
2 ಲೋಟ – ಬೆಲ್ಲ
7 ಲೋಟ – ನೀರು
3-4 ಚಮಚ – ತುಪ್ಪ
ಮಾಡುವ ಬಗೆ
- ಹುರುಳಿ ಹುರಿದು ಮಿಕ್ಸರ್ ನಲ್ಲಿ ಹಿಟ್ಟು ಮಾಡಿ ಇಟ್ಟುಕೊಳ್ಳಿ.
- 2-3 ಚಮಚ ತುಪ್ಪದಲ್ಲಿ ಬಾಂಬೆ ರವೆ ಹುರಿದು 3 ಲೋಟ ನೀರು ಹಾಕಿ ಒಂದು ಕುದಿ ಕುದಿಸಿ.
- ಹುರುಳಿ ಹಿಟ್ಟನ್ನು ಒಂದು ಲೋಟ ನೀರಿನಲ್ಲಿ ಕಲಸಿ ಸೇರಿಸಿ. ಮತ್ತೆ 3 ಲೋಟ ನೀರು ಸೇರಿಸಿ ಒಂದು ಕುದಿ ಕುದಿಸಿ.
- ನಂತರ ಬೆಲ್ಲ ಹಾಕಿ ಒಂದು ನಿಮಿಶ ಕುದಿಸಿ, ಸ್ವಲ್ಪ ತುಪ್ಪ ಹಾಕಿ ಇಳಿಸಿ.
ಈಗ ಹುರುಳಿ ಸಂಗಟಿ ತಯಾರಾಯಿತು. ಇದಕ್ಕೆ ಬೇಕಾದರೆ ಸ್ವಲ್ಪ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಶಿ ಸೇರಿಸಬಹುದು. ಹುರುಳಿ ಸಂಗಟಿ ಆರೋಗ್ಯಕ್ಕೂ ಒಳ್ಳೆಯದು.
ಇತ್ತೀಚಿನ ಅನಿಸಿಕೆಗಳು