ಬ್ರೆಡ್ ಬೋಂಡಾ!

– ಕಲ್ಪನಾ ಹೆಗಡೆ.

ಬ್ರೆಡ್ ಬೋಂಡಾ Bread Bonda

ಏನೇನು ಬೇಕು?

ಅರ‍್ದ ಪಾವು ಕಡ್ಲೆಹಿಟ್ಟು
ಕಾಲು ಪಾವು ಅಕ್ಕಿಹಿಟ್ಟು
ಅರ‍್ದ ಚಮಚ ಓಕಾಳು
1 ಚಮಚ ಮೆಣಸಿನ ಪುಡಿ
ರುಚಿಗೆ ತಕ್ಕಶ್ಟು ಉಪ್ಪು
ಪುದಿನಾ ಸೊಪ್ಪು
2 ಹಸಿಮೆಣಸಿನಕಾಯಿ
ಕಾಲು ಚಮಚ ಓಂಕಾಳು
ಎಣ್ಣೆ
ಬ್ರೆಡ್

ಮಾಡೋದು ಹೇಗೆ?

ಮೊದಲು ಒಂದು ಪಾತ್ರೆಗೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಮೆಣಸಿನ ಪುಡಿ, ಓಂಕಾಳು, ರುಚಿಗೆ ತಕ್ಕಶ್ಟು ಉಪ್ಪು, ನೀರು ಹಾಕಿ ಚೆನ್ನಾಗಿ ತೆಳ್ಳಗೆ ಕಲಸಿಕೊಳ್ಳಿ.

ಪುದಿನಾ ಸೊಪ್ಪಿನ ಚಟ್ನಿ: ಮೊದಲು ಪುದಿನಾ ಸೊಪ್ಪಿನ ದಂಟನ್ನು ತೆಗೆದು ಸೊಪ್ಪನ್ನು ಬಿಡಿಸಿಕೊಂಡು ಚೆನ್ನಾಗಿ ತೊಳೆದು ಅದಕ್ಕೆ ಹಸಿಮೆಣಸಿನಕಾಯಿ, ಓಂಕಾಳನ್ನು ರುಚಿಗೆ ತಕ್ಕಶ್ಟು ಉಪ್ಪನ್ನು ಹಾಕಿ ರುಬ್ಬಿಕೊಳ್ಳಿ.

ಬ್ರೆಡ್ಡನ್ನು ತೆಗೆದುಕೊಂಡು ಒಂದರಲ್ಲಿ ನಾಲ್ಕು ಬಾಗ ಮಾಡಿ ಕ್ರಾಸ್ ಮಾಡಿ ಕತ್ತರಿಸಿಕೊಳ್ಳಿ. ಆಮೇಲೆ ಎರಡು ಬಾಗದ ಬ್ರೆಡ್‍ನ್ನು ತೆಗೆದುಕೊಳ್ಳಿ ಪ್ರತಿ ಬಾಗದ ಮೇಲು ಒಂದು ಚಮಚದಿಂದ ಪುದಿನಾ ಸೊಪ್ಪಿನ ಚಟ್ನಿಯನ್ನು ಸವರಿ ಎರಡು ಬಾಗವನ್ನು ಸೇರಿಸಿ ಕಡ್ಲೆಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಚೆನ್ನಾಗಿ ಎರಡುಕಡೆ ಬೇಯಿಸಿಕೊಳ್ಳಿ. ಆಮೇಲೆ ತಯಾರಿಸಿದ ಬ್ರೆಡ್ ಬೋಂಡಾವನ್ನು ಹಾಗೆಯೇ ತಿನ್ನಲು ನೀಡಿ ಅತವಾ ಟೊಮೇಟೊ ಸಾಸ್ ಹಾಕಿ ಸವಿಯಲು ನೀಡಿ.

(ಚಿತ್ರಸೆಲೆ: ಕಲ್ಪನಾ ಹೆಗಡೆ)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Savita kulakarni says:

    ಚೆನ್ನಾಗಿದೆ

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *