ಕವಿತೆ: ಓಡುತ್ತಲೇ ಇರಬೇಕು ಗುರಿ ಮುಟ್ಟುವ ತನಕ

–  ಶಶಾಂಕ್.ಹೆಚ್.ಎಸ್.

ಓಟ, Race

ಈ ಜೀವನವೆಂಬುದು ಓಟದ ಸ್ಪರ‍್ದೆ
ಈ ಓಟದ ಸ್ಪರ‍್ದೆಯಲ್ಲಿ ನಿಂತರೆ ಸಾವು
ನಿಲ್ಲದ ಹಾಗೆ ಓಡುತ್ತಿದ್ದರೆ ಬದುಕು
ಬದುಕೆಂಬುದು ನಿಂತ ನೀರಲ್ಲ ಕೆರೆಯ ರೀತಿ
ಬದುಕು ಸದಾ ಹರಿಯುವ ನೀರು ನದಿಯ ರೀತಿ

ಈ ಬದುಕಿನ ಓಟದಲ್ಲಿ ಅನೇಕ
ಜನರು ನಮ್ಮ ಜೊತೆಯಾಗಬಹುದು
ಕೆಲವರು ದಾರಿ ನಡುವೆಯೇ ಇಳಿದು ಹೋಗಬಹುದು
ಇನ್ನೂ ಕೆಲವರು ಕೊನೆಯವರೆಗೂ ಜೊತೆಯಾಗಿ ನಿಲ್ಲಬಹುದು

ಕೆಲವರು ದಾರಿ ನಡುವೆ ಇಳಿದು ಹೋಗುವ ಮುನ್ನ
ಕೆಲವೊಂದು ಜೇವನ ಪಾಟ ಕಲಿಸಿ ಹೋಗಿರುತ್ತಾರೆ
ಜೊತೆಗಿರುವವರು ಆ ಪಾಟದ
ಅರ‍್ತವ ನಮಗೆ ಅರ‍್ತೈಸಿರುತ್ತಾರೆ

ಜೀವನದಲ್ಲಿ ಒಮ್ಮೆ ಸೋತರೆ ಸಾವೇಕೆ
ಮುಂದಿನ ಅವಕಾಶದಲ್ಲಿ ಗೆಲ್ಲಬಹುದು
ಆಗುವ ಅವಮಾನಗಳಿಗೆ ಬೇಜಾರೇಕೆ?
ಅ ಅವಮಾನಕ್ಕೆ ಉತ್ತರ ನಿಮ್ಮ ಸಾದನೆ ಅಲ್ಲವೇ
ಬಿಟ್ಟು ಹೋದವರ ನೆನಸಿ ಕೊರಗುವುದೇಕೆ?
ಅವರಿಗೆ ನಿಮ್ಮ ನೆನಪಿಲ್ಲದ್ದಿದ್ದಾಗ!

ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ
ಎಲ್ಲವ ಸರಿದೂಗಿಸಿಕೊಂಡು ಮುನ್ನಡೆಯುತ್ತಿರಬೇಕು
ಈ ಜೀವನವೆಂಬ ಓಟವ
ಓಡುತ್ತಲೇ ಇರಬೇಕು ಗುರಿ ಮುಟ್ಟುವ ತನಕ

( ಚಿತ್ರ ಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications