ಪಂಚಮಿಗೆ ಗೋದಿ ಹಿಟ್ಟಿನ ಉಂಡೆ

ಸವಿತಾ.

ಗೋದಿ ಹಿಟ್ಟಿನ ಉಂಡೆ

ಪಂಚಮಿ ಹಬ್ಬಕ್ಕೆ ಉತ್ತರ ಕರ‍್ನಾಟಕದ ಕಡೆ ಈ ಉಂಡೆಯನ್ನು ಮಾಡುವರು

ಏನೇನು ಬೇಕು?

  • 1 ಲೋಟ ಗೋದಿ ಹಿಟ್ಟು
  • 3/4 ಲೋಟ ಬೆಲ್ಲದ ಪುಡಿ
  • 1/4 ಲೋಟ ತುಪ್ಪ
  • 10 ಗೋಡಂಬಿ
  • 10 ಒಣ ದ್ರಾಕ್ಶಿ
  • 2 ಏಲಕ್ಕಿ
  • 2 ಲವಂಗ
  • ಒಂದು ಚಿಟಿಕೆ ಜಾಯಿಕಾಯಿ ಪುಡಿ

ಮಾಡುವ ಬಗೆ

  • ಗೋದಿ ಹಿಟ್ಟಿಗೆ ತುಪ್ಪ ಹಾಕಿ ಹುರಿದು ತೆಗೆದು ಇಟ್ಟುಕೊಳ್ಳಿ.
  • ಎರಡು ಚಮಚ ತುಪ್ಪದಲ್ಲಿ ಗೋಡಂಬಿ ದ್ರಾಕ್ಶಿ ಹುರಿದು ತೆಗೆದಿಡಿ.
  • ಅದೇ ಬಾಣಲೆಗೆ ಬೆಲ್ಲದ ಪುಡಿ ಹಾಕಿ ಸ್ವಲ್ಪ ಬಿಸಿ ಮಾಡಿ ಬೆಲ್ಲ ಕರಗಿಸಿ .
  • ಎರಡು ಚಮಚ ನೀರು ಹಾಕಿ ಕುದಿಸಿ ಕರಗಿಸಿ.
  • ಒಲೆ ಆರಿಸಿ ಗೋದಿ ಹಿಟ್ಟು ಹಾಕಿ ಚೆನ್ನಾಗಿ ತಿರುಗಿಸಿ.
  • ಏಲಕ್ಕಿ ಲವಂಗ ಜಾಯಿಕಾಯಿ ಪುಡಿ ಸೇರಿಸಿ.
  • ಕೈಯಲ್ಲಿ ಚೆನ್ನಾಗಿ ತಿಕ್ಕಿ, ಗೋಡಂಬಿ ದ್ರಾಕ್ಶಿ ಸೇರಿಸಿ ಒಂದೊಂದೇ ಉಂಡೆ ಕಟ್ಟಿ ಇಟ್ಟುಕೊಳ್ಳಿ

ಈಗ ಗೋದಿ ಹಿಟ್ಟಿನ ಉಂಡೆ ಸವಿಯಲು ಸಿದ್ದ 🙂

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *