ಅಕ್ಟೋಬರ್ 8, 2019

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 5ನೆಯ ಕಂತು

– ಸಿ.ಪಿ.ನಾಗರಾಜ. ಓದಿಸುವಣ್ಣಗಳೆನ್ನ ಮಾತಾಡ ಕಲಿಸಿದರಲ್ಲದೆ ಮನಕ್ಕೆ ಮಾತಾಡ ಕಲಿಸಲಿಲ್ಲವಯ್ಯಾ. ( 1116 – 101 ) ಓದು=ಕಲಿ/ಲಿಪಿರೂಪದ ಬರಹದಲ್ಲಿನ ವಿಚಾರಗಳನ್ನು ತಿಳಿಯುವುದು; ಓದಿಸುವ+ಅಣ್ಣಗಳ್+ಎನ್ನ; ಓದಿಸುವ=ವಿದ್ಯೆಯನ್ನು ಕಲಿಸುವ/ಅಕ್ಕರದ ಉಚ್ಚಾರ ಮತ್ತು ಬರಹವನ್ನು ಹೇಳಿಕೊಡುವ;...