ಕವಿತೆ : ಎತ್ತರಕೆ ಏರಿದಾಗ
ಆಕಾಶದಲ್ಲಿ ಹಾರುವ ಹಕ್ಕಿಗೆ
ಬೂಮಿಯು ಚಿಕ್ಕದಂತಾಗಿತ್ತು
ಬೂಮಿಗೆ ಇಳಿದ ಹಕ್ಕಿಗೆ
ಎಲ್ಲಿರುವೆ ನಾನೀಗ ಎಂದಂತಾಗಿತ್ತು
ಏರು ಎತ್ತರವ ಬಾನೆತ್ತರವ
ಏರಿದ ಮೇಲೆ ಒಮ್ಮೆಯಾದರೂ
ಕೆಳಗೆ ಬಂದೆ ಬರುವೆ
ಹುಡುಕುವೆ ನಿನ್ನ ಆವಾಸಸ್ತಾನವ
ಮೋಹಕ ಮಲೆಯಲ್ಲಿ
ಕಾಂಚನದ ಸೆಲೆಯಲ್ಲಿ
ಎಲ್ಲವೂ ನಶ್ವರ ಎಲ್ಲರೂ ದೂರ ಪರಿಚಿತ
ಚಿರ ಪರಿಚಿತನಾಗು ಎತ್ತರ ಏರಿದಾಗಲು
ಸ್ಪರ್ದಾತ್ಮಕ ಜಗತ್ತು ಇದು
ನಿನ್ನ ಹಿಂದಟ್ಟಲು
ಸಾವಿರ ಸೈನ್ಯವುಂಟು
ತಿರುಗಿ ನೋಡುವಶ್ಟರಲ್ಲಿ
ಮುಂದಿರುವರು ನಿನಗಿಂತಲು
ಬದುಕು ಸಾಗಿಸು ತಾರ್ಕಿಕವಾಗಿ
ಅಕ್ರಮದ ಅಸಲುಗಳ ದೂರಮಾಡಿ
ಬೆಳೆಯುತ್ತಿರುವ ಜಗತ್ತು ಇದು
ಬೆಳೆಯುತಿರು ನೀನು
ಕೆಳಗೆ ನೋಡುವುದ ಮರೆಯದೆ
(ಚಿತ್ರ ಸೆಲೆ: unsplash.com)
ಇತ್ತೀಚಿನ ಅನಿಸಿಕೆಗಳು