ಕವಿತೆ : ಮಾಯಾಮ್ರುಗ ಬೆನ್ನು ಹತ್ತಿದೆ
ಈ ಮೊದಲು
ಒಂದು ರಾತ್ರಿ ಕಳೆದರೆ
ಸಾವಿರ ರಾತ್ರಿ ಸರಿದವೆಂದು
ಮುಸುಗು ಹೊದ್ದು ಮಲಗುತಿದ್ದೆವು
ಆದರೀಗ ಒಂದೊಂದು ರಾತ್ರಿಯೂ
ಸಾವಿರ ರಾತ್ರಿಗಳಾಗಿ
ದಿನ ದಿನವೂ ಮುಸುಗು ಹೊದ್ದು
ಮಲಗಲಾಗದೆ ನಿದ್ದೆಗೆಡುತ್ತಿದ್ದೇವೆ
ಅಪ್ಪಿ ತಪ್ಪಿ ಕನಸೂ ನಾವಿರುವ
ಮನೆಯ ಹಾದಿಬದಿ ಸುಳಿಯುವುದಿಲ್ಲ
ಎಕರೆಗಟ್ಟಲೆ ಹಸಿವು ಅವಮಾನಗಳನ್ನು
ಉಂಡು ನೆಮ್ಮದಿಯ
ನಿಟ್ಟುಸಿರಿಗಾಗಿ ಹಪಹಪಿಸುತ್ತಿದ್ದೇವೆ
ಮಹಾಮಾಯೆಗೆ ಬಿದ್ದ ನಾವು
ಎಲ್ಲರೊಂದಿಗೆ ಮಗುವಾಗಿಯೇ
ಹೋಗಬೇಕಾಗಿದೆ
ಪೂರ‍್ವ ಪಶ್ಚಿಮ ಎಂದರೂ ಸರಿ
ಕತ್ತೆ ಕುದುರೆಯಾಗಿದೆ ಎಂದರೂ
ಸರಿ ಅನ್ನಬೇಕಾಗಿದೆ
ಮಾಯಾಮ್ರುಗ ಬೆನ್ನು ಹತ್ತಿದೆ
ಕಣ್ತೆರೆದ ಕ್ಶಣದಿಂದಲೆ
ನಗು ಬರದಿದ್ದರೂ ನಗಬೇಕು
ಅಳು ಬಂದರೂ ನುಂಗಬೇಕು
ಪರೀಕ್ಶೆಯಲಿ ಪಾಸಾದರೂ ಸರಿ
ಪೇಲಾದರೂ ಸರಿ
( ಚಿತ್ರಸೆಲೆ : pixabay.com )
ಇತ್ತೀಚಿನ ಅನಿಸಿಕೆಗಳು