ಉದ್ದಿನ ಬೇಳೆ ಉಂಡೆ
– ಸವಿತಾ.
ಬೇಕಾಗುವ ಸಾಮಾನುಗಳು
- ಉದ್ದಿನ ಬೇಳೆ – 1 ಲೋಟ
- ಸಕ್ಕರೆ – 3/4 ಲೋಟ
- ತುಪ್ಪ – 3/4 ಲೋಟ
- ಏಲಕ್ಕಿ – 3-4
- ದ್ರಾಕ್ಶಿ – ಸ್ವಲ್ಪ
- ಗೋಡಂಬಿ – ಸ್ವಲ್ಪ
ಮಾಡುವ ಬಗೆ
ಉದ್ದಿನ ಬೇಳೆ ಹುರಿದು ಹಿಟ್ಟು ಮಾಡಿಸಿಕೊಳ್ಳಿ. ಮನೆಯಲ್ಲೇ ಮಿಕ್ಸರ್ ನಲ್ಲಿ ಹಿಟ್ಟು ಮಾಡಿ, ಜರಡಿ ಹಿಡಿದು ಇಟ್ಟುಕೊಳ್ಳಬಹುದು. ಸ್ವಲ್ಪ ತುಪ್ಪ ಹಾಕಿ, ಸ್ವಲ್ಪ ದ್ರಾಕ್ಶಿ ಗೋಡಂಬಿ ಹುರಿದು ತೆಗೆದಿಡಿ. ಅದೇ ಬಾಣಲೆಗೆ ತುಪ್ಪ ಹಾಕಿ ಉದ್ದಿನ ಹಿಟ್ಟನ್ನು ಚೆನ್ನಾಗಿ ಹುರಿಯಿರಿ. ನಿಮ್ಮಿಶ್ಟದಂತೆ 1/2 ಇಲ್ಲವೇ 3/4 ಲೋಟ ತುಪ್ಪ ಹಾಕಿಕೊಳ್ಳಬಹುದು. ಉಂಡೆ ಕಟ್ಟಲು ಬರುವಂತೆ ಇರಬೇಕು ಅಶ್ಟೇ. ಮಿಕ್ಸರ್ ನಲ್ಲಿ ಸಕ್ಕರೆ ಪುಡಿ ಮಾಡಿ ಹಿಟ್ಟಿಗೆ ಸೇರಿಸಿ. ಹುರಿದ ಗೋಡಂಬಿ ಒಣ ದ್ರಾಕ್ಷಿ ಸೇರಿಸಿ. ಏಲಕ್ಕಿ ಪುಡಿ ಮಾಡಿ ಸೇರಿಸಿ. ಎಲ್ಲ ಬೆರೆಯುವಂತೆ ಕೈಯಿಂದ ತಿಕ್ಕಿ ಉಂಡೆ ಕಟ್ಟಿ ಇಟ್ಟುಕೊಳ್ಳಿ.
ಆರೋಗ್ಯಕರ ಉದ್ದಿನ ಬೇಳೆ ಉಂಡೆ ಸವಿಯಲು ತಯಾರು. ಇದನ್ನು ಬಾಣಂತಿಯರಿಗೆ ಆರೋಗ್ಯ ಸುದಾರಿಸಲೆಂದು ಕೊಡುತ್ತಾರೆ. ನಾಗರಪಂಚಮಿ ಹಬ್ಬಕ್ಕೂ ಉದ್ದಿನ ಬೇಳೆ ಉಂಡೆ ಮಾಡುತ್ತಾರೆ.
ಇತ್ತೀಚಿನ ಅನಿಸಿಕೆಗಳು