ಕವಿತೆ: ಬೇಸರಿನ ಸಂಜೆಯಿದು ಬೇಡವಾಗಿದೆ

– ಸ್ಪೂರ‍್ತಿ. ಎಂ.

ಸಂಜೆ, ಬೇಸರ,

ಒಲಿದ ಪ್ರಾಣ ಸ್ನೇಹಿತೆಯ ಸನಿಹವಿಲ್ಲದೆ
ನನ್ನ ಕಣ್ಣಾಲಿಗಳು ನೀರು ಸುರಿಸಿ ಸೋತಿವೆ
ನಿನ್ನ ಬೆಚ್ಚಗಿನ ಪ್ರೀತಿಯ ಅಪ್ಪುಗೆ ಸಿಗದೆ
ಬೇಸರಿನ ಸಂಜೆಯಿದು ಬೇಡವಾಗಿದೆ

ನಿನ್ನ ಕಮಲದಂತಹ ಮೊಗವ ನೋಡಲಾಗದೆ
ಜೇನಿನಂತಹ ನಿನ್ನ ಸವಿನುಡಿ ಕೇಳಲಾಗದೆ
ಒಟ್ಟಿಗೆ ಕೈ ಹಿಡಿದು ಹೆಜ್ಜೆ ಹಾಕಲಾಗದೆ
ಬೇಸರಿನ ಸಂಜೆಯಿದು ಬೇಡವಾಗಿದೆ

ನನಗೆ ತಿಳಿದಿದೆ ನಿನ್ನ ಮನವೂ ನೊಂದಿದೆ
ಕಾತರದಲ್ಲಿ ನಿನಗೆ ನಿರಾಶೆಯಾಗಿದೆ
ಆದರೂ ವಿದಿಗೆ ಇದು ಅರ‍್ತವಾಗದೆ
ಬೇಸರಿನ ಸಂಜೆಯಿದು ಬೇಡವಾಗಿದೆ

ಎಲ್ಲೆಡೆ ಮ್ರುತ್ಯು ತನ್ನ ಕೆನ್ನಾಲಿಗೆ ಚಾಚಿದೆ
ಇಡೀ ದೇಶವೇ ಸ್ತಬ್ದವಾಗಿ ಹೋಗಿದೆ
ಇದರಿಂದ ನಿನ್ನ ನನ್ನ ಬೇಟಿಯಾಗದೆ
ಬೇಸರಿನ ಸಂಜೆಯಿದು ಬೇಡವಾಗಿದೆ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Akash Lokhande says:

    ತುಂಬಾ ಅರ್ಥಪೂರ್ಣವಾದ ಸಾಲುಗಳು…

ಅನಿಸಿಕೆ ಬರೆಯಿರಿ: