ಆರೋಗ್ಯಕ್ಕೆ ಒಳ್ಳೆಯದು ಕಶಾಯ

ಕಲ್ಪನಾ ಹೆಗಡೆ.

ಕಶಾಯ, kashaaya

ಕಶಾಯ ಆರೋಗ್ಯಕ್ಕೆ ಒಳ್ಳೆಯದು. ರೋಗಗಳನ್ನು ತಡೆಯುವ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಮಲೆನಾಡಲ್ಲಿ ಕಶಾಯವನ್ನು ಹೆಚ್ಚಾಗಿ ಮಾಡುತ್ತಿರುತ್ತಾರೆ. ಕಶಾಯವನ್ನು ಮಾಡಿ ಪ್ರತಿ ದಿನ ಕುಡಿಯುವ ಜನರೂ ಇದ್ದಾರೆ. ಈಗಾಗಲೇ ಸಾಕಶ್ಟು ಜನರಿಗೆ ಕಶಾಯವನ್ನು ಹೇಗೆ ಮಾಡುವುದು ಅಂತ ಗೊತ್ತಿರಬಹುದು. ಗೊತ್ತಿಲ್ಲದೇ ಇರೋರಿಗೆ ನನ್ನ ಬರಹ ಸಹಾಯವಾಗಬಹುದು ಅಂತ ಅಂದುಕೊಂಡು ಓದುಗರ ಮುಂದೆ ಇಡುತ್ತಿದ್ದೇನೆ.

ಏನೇನು ಬೇಕು?

1. ಕಾಲು ಕೆ.ಜಿ.ದನಿಯಾ (ಕೊತ್ತೂಂಬರಿ ಬೀಜ)
2. 100 ಗ್ರಾಂ ಜೀರಿಗೆ
3. 10 ರಿಂದ 15 ಕಾಳು ಮೆಣಸು
4. ಶುಂಟಿ

ಮಾಡುವ ಬಗೆ

ಮೊದಲು ದನಿಯಾ, ಜೀರಿಗೆ, ಕಾಳು ಮೆಣಸು, ಶುಂಟಿ ಎಲ್ಲವನ್ನು ಒಂದು ಬಾಣಲೆಗೆ ಹಾಕಿ ಹುರಿದುಕೊಂಡು, ಸ್ವಲ್ಪ ಆರಿದ ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿ ಒಂದು ಡಬ್ಬದಲ್ಲಿ ಹಾಕಿ ಇಟ್ಟುಕೊಳ್ಳಿ. (ಸೂಚೆನೆ: ಎಣ್ಣೆಯನ್ನು ಹಾಕದೆ ಹುರಿದಿಟ್ಟುಕೊಳ್ಳಿ). ಕಶಾಯ ಮಾಡುವಾಗ ಮೊದಲು 3 ಗ್ಲಾಸ್ ನೀರು, 1 ಗ್ಲಾಸ್ ಹಾಲು, ಆದಕ್ಕೆ 2 ಚಮಚ ನೀವು ಮಾಡಿಟ್ಟ ಕಶಾಯದ ಪುಡಿ ಹಾಗೂ ಸಕ್ಕರೆ ಅತವಾ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಈಗ ಕಶಾಯ ರೆಡಿ. ಗ್ಲಾಸಿಗೆ ಹಾಕಿ ಕುಡಿಯಲು ನೀಡಿ.

( ಚಿತ್ರ ಸೆಲೆ : ಕಲ್ಪನಾ ಹೆಗಡೆ  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: