ಕವಿತೆ: ಬದುಕು ಸುತ್ತುತ್ತಿದೆ ಈ ವೈರಾಣು ಸುತ್ತಾ

– ವಿನು ರವಿ.

ಕೊರೊನಾ ವೈರಸ್, Corona Virus

 

ಇದಾವುದೀ ವೈರಾಣುವಿನ
ರಾಮಾಯಣ
ಹೆಚ್ಚುತ್ತಲೇ ಇದೆ ದಿನವೂ
ಮನೆ ಮನೆಯಲ್ಲು ತಲ್ಲಣ

ಸಾವಿರಾರು ವೈರಾಣುಗಳು
ನಮ್ಮ ಸುತ್ತ ಮುತ್ತ
ಇದೊಂದು ವೈರಾಣು ಮಾತ್ರ
ಕಟ್ಟುತ್ತಿದೆ ದಿನವೂ
ಸಾವಿನ ಹುತ್ತ

ಯಾವುದು ಸತ್ಯಾ
ಯಾವುದು ಮಿತ್ಯಾ
ಲೆಕ್ಕಾಚಾರದೊಳಗೆ ಬಸವಳಿದಿದೆ ಚಿತ್ತ

ಆಟವಿಲ್ಲ ಪಾಟವಿಲ್ಲ
ಕೆಲಸ ಕಾರ‍್ಯವೆಲ್ಲ ಅಸ್ತವ್ಯಸ್ತ
ಬದುಕು ಸುತ್ತುತ್ತಿದೆ
ಈ ವೈರಾಣು ಸುತ್ತಾ

ಸರಳವಾಗಿದೆ ಉಪಚಾರ
ಕೆಲವರಿಗಂತೂ ಬೇಕಾಗೆ ಇಲ್ಲ
ನಿಜವಾದ ಪರಿಹಾರ
ತಪ್ಪಿಲ್ಲ ಇನ್ನೂನು
ಸಾವು ನೋವಿನ ಹಾಹಾಕಾರ

ಕೊನೆಗಾಣದೆ ನಮ್ಮ
ನಡುವಿನ ಸ್ವಾರ‍್ತ ಅಹಂಕಾರ
ನಿಲ್ಲದು ಇಂತಹ
ನೂರಾರು ವೈರಾಣುಗಳ ಪ್ರಹಾರ

 

( ಚಿತ್ರ ಸೆಲೆ : wikipedia.org  )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ನೈಸ್

ಅನಿಸಿಕೆ ಬರೆಯಿರಿ:

%d bloggers like this: