ಕವಿತೆ: ಬೀದಿ ದೀಪದ ಕತೆ
ಬೀದಿ ದೀಪವೊಂದು
ಹೇಳುತ್ತಿದೆ ಕತೆಯ
ಸಮಯದೊಂದಿಗೆ
ಬದಲಾದ ಈ ಜೀವನದ ವ್ಯತೆಯ
ಅಜ್ಜ ಅಜ್ಜಿಯ ಮಡಿಲಲ್ಲಿ
ಕುಳಿತು ಆಡುತ್ತಿದ್ದವು ಮಕ್ಕಳು ಅಂದು
ಜಗಳವಾಗುತ್ತಿವೆ ಇಂದು ಅಜ್ಜ ಅಜ್ಜಿ
ಮನೆಯಲ್ಲಿದ್ದರೆ, ಕರ‍್ಚು ಹೆಚ್ಚೆಂದು
ಚಂದಿರನ ಜೊತೆಯಲ್ಲಿ
ಬೆಳದಿಂಗಳ ಊಟ ಆಗುತ್ತಿತ್ತು ಅಂದು
ಟಿವಿ ಕಂಪ್ಯೂಟರುಗಳಿಂದ
ಚಂದಿರನೇ ಒಂಟಿಯಾಗಿಹನು ಇಂದು
ಅಂದು ರೋಡಿನಲ್ಲಿ ಆಡುತ್ತಿದ್ದರು
ಕ್ರಿಕೆಟ್, ಗೋಲಿ, ಚಿನ್ನೀ ದಾಂಡು
ಇಂದು ಟಿವಿ ಮೊಬೈಲ್ ಎದುರು
ಎಲ್ಲ ಮಕ್ಕಳು ದಂಡು
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು