ಸವಿಯೋಣ ಪ್ರೈಡ್‍ರೈಸ್
– ಕಲ್ಪನಾ ಹೆಗಡೆ.
ಬೇಕಾಗುವ ಸಾಮಾನುಗಳು
- ಅಕ್ಕಿ – 1.5 ಪಾವು
- ಸಣ್ಣಗೆ ಹೆಚ್ಚಿದ ಹೂಕೋಸು – 2 ಕಪ್ಪು
- ಸಣ್ಣಗೆ ಹೆಚ್ಚಿದ ಹುರುಳಿಕಾಯಿ – 2 ಕಪ್ಪು
- ಹಸಿರು ಬಟಾಣಿ – 2 ಕಪ್ಪು
- ಕ್ಯಾರೇಟ್ – 1 ಕಪ್ಪು
- ದಪ್ಪ ಮೆಣಸಿನಕಾಯಿ – 1 ಕಪ್ಪು
- ಟೊಮೇಟೊ – 1
- ಗರಮ್ ಮಸಾಲೆ ಪುಡಿ – 2 ಚಮಚ
- ಗೋಡಂಬಿ – 10
- ಜೀರಿಗೆ – 1 ಚಮಚ
- ಸಾಸಿವೆ – ಕಾಲು ಚಮಚ
- ತುಪ್ಪ – 2 ಚಮಚ
- ಎಣ್ಣೆ – 3 ಚಮಚ
- ಶುಂಟಿ ಪೇಸ್ಟ್ – ಚಿಟಿಗೆಯಶ್ಟು
- ಹಸಿಮೆಣಸಿನ ಕಾಯಿ – 3
- ಕಾಳುಮೆಣಸಿನ ಪುಡಿ – ಕಾಲು ಚಮಚ
ಮಾಡುವ ಬಗೆ
ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು, ಒಂದು ಪಾವು ಅತವಾ ಕಪ್‍ಗೆ, ಒಂದೂ ಕಾಲು ಕಪ್ ನೀರನ್ನು ಹಾಕಿ ಕುಕ್ಕರ್‍ನಲ್ಲಿ ಇಟ್ಟು ಎರಡು ಸಲ ಕೂಗಿಸಿ. ಇದು ಆರಿದ ನಂತರ ಅನ್ನವನ್ನು ತೆಗೆದಿಟ್ಟುಕೊಳ್ಳಬೇಕು. ಆನಂತರ ಹೂಕೋಸು, ಕ್ಯಾರೇಟ್, ಹುರುಳಿಕಾಯಿ, ದಪ್ಪ ಮೆಣಸಿನಕಾಯಿ ಮತ್ತು ಟೊಮೇಟೊ ಇವೆಲ್ಲವನ್ನು ಸಣ್ಣಗೆ ಹೆಚ್ಚಿ ಒಂದು ಪಾತ್ರೆಯಲ್ಲಿ ಇಟ್ಟುಕೊಳ್ಳಬೇಕು.
ಒಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದು ಕಾದ ಬಳಿಕ ಚಿಟಿಕೆ ಸಾಸಿವೆ, ಹಸಿ ಮೆಣಸಿನ ಕಾಯಿ, ಜೀರಿಗೆ ಮತ್ತು ಗೋಡಂಬಿಯನ್ನು ಹಾಕಿ ಪ್ರೈ ಮಾಡಿಕೊಳ್ಳಬೇಕು. ತದನಂತರ ಅದಕ್ಕೆ ಹೆಚ್ಚಿಕೊಂಡ ತರಕಾರಿಗಳನ್ನು ಮತ್ತು ಜೊತೆಗೆ ಹಸಿ ಬಟಾಣಿಕಾಳುಗಳನ್ನು ಹಾಕಿ ಪ್ರೈ ಮಾಡಿಕೊಳ್ಳಬೇಕು. ಪ್ರೈ ಆದ ಮೇಲೆ ಅದಕ್ಕೆ ರುಚಿಗೆ ತಕ್ಕ್ಜಶ್ಟು ಉಪ್ಪು, ಗರಮ್ ಮಸಾಲೆ ಪುಡಿ, ಕಾಳುಮೆಣಸಿನ ಪುಡಿ, ಶುಂಟಿ ಪೇಸ್ಟ್, ಜೊತೆಗೆ ಅನ್ನವನ್ನು ಕೈಯಿಂದ ಉದುರು ಮಾಡಿ ಅದಕ್ಕೆ ಎರಡು ಚಮಚ ತುಪ್ಪ ಹಾಕಿ ಚೆನ್ನಾಗಿ ಸೌಟಿನಿಂದ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಬಿಸಿ ಬಿಸಿ ಪ್ರೈಡ್‍ರೈಸ್ ತಯಾರಾಗಿದ್ದು ಇದನ್ನು ಟೋಮೇಟೊ ಸಾಸಿನೊಂದಿಗೆ ಅತವಾ ಹಾಗೆ ಸವಿಯಲು ನೀಡಬಹುದು.
ಇತ್ತೀಚಿನ ಅನಿಸಿಕೆಗಳು