ದೊಡ್ಡ ಪತ್ರೆ ಎಲೆ ಚಹಾ
– ಸವಿತಾ.
ಬೇಕಾಗುವ ಸಾಮಾನುಗಳು
- ದೊಡ್ಡ ಪತ್ರೆ (ಅಜವಾನ್) ಎಲೆ – 6
- ಏಲಕ್ಕಿ – 2
- ಕರಿಮೆಣಸಿನ ಕಾಳು – 8
- ಶುಂಟಿ – ಅರ್ದ ಇಂಚು
- ಚಹಾ ಪುಡಿ – 1 ಚಮಚ
- ನೀರು – 1 ಕಪ್
- ಹಾಲು – 2 ಕಪ್
- ಬೆಲ್ಲದ ಪುಡಿ – 2 ಚಮಚ
ಮಾಡುವ ಬಗೆ
ದೊಡ್ಡಪತ್ರೆ ಎಲೆ ತೊಳೆದು, ಶುಂಟಿ, ಕರಿಮೆಣಸಿನ ಕಾಳು, ಏಲಕ್ಕಿ ಎಲ್ಲ ಸೇರಿಸಿ ಸ್ವಲ್ಪ ಕುಟ್ಟಿ ಪುಡಿ ಮಾಡಿ ಇಟ್ಟುಕೊಳ್ಳಿ .
ನೀರು ಕುದಿಯಲು ಇಟ್ಟು, ಕುಟ್ಟಿದ ಪುಡಿ ಸೇರಿಸಿ. ಚಹಾ ಪುಡಿ ಹಾಕಿ ಒಂದು ಕುದಿ ಕುದಿಸಿ. ಹಾಲು, ಬೆಲ್ಲ ಹಾಕಿ ಇನ್ನೊಂದು ಕುದಿ ಕುದಿಸಿ ಇಳಿಸಿದರೆ ದೊಡ್ಡಪತ್ರೆ ಎಲೆ ಚಹಾ ತಯಾರು.
ಕಪ್ ಗೆ ಸೋಸಿಕೊಂಡು ಕುಡಿಯಿರಿ.
(ಇದೊಂದು ಮನೆ ಮದ್ದು , ಡಾಕ್ಟರ್ ಔಶದಿ ಯ ಜೊತೆ ಅತವಾ ಸಲಹೆ ಕೇಳಿ ಕೆಮ್ಮು ಶೀತ ಗಂಟಲು ಜ್ವರ ಬಂದಾಗ, ಆರೋಗ್ಯ ಕಾಪಾಡಲು ದೊಡ್ಡ ಪತ್ರೆ ಎಲೆ ಚಹಾ ಮಾಡಿ ಕುಡಿಯಿರಿ.)
ಇತ್ತೀಚಿನ ಅನಿಸಿಕೆಗಳು