ಕವಿತೆ: ನೆನಪುಗಳು

– ಕಾಂತರಾಜು ಕನಕಪುರ.

ತರಾತುರಿಯಲ್ಲಿ ಹೊರಟು
ನಿಂದಾಗ ಬಂದು ವಕ್ಕರಿಸುವ
ಬೇಡದ ಬಂದುಗಳು

ಮಾಯುತ್ತಿರುವ ಗಾಯವನು
ಕೆರೆದು ವ್ರಣಗೊಳಿಸುವ
ತೀಟೆ ಕೈಗಳು

ಉರಿಯುತ್ತಿರುವ ಎದೆ ಬೆಂಕಿಗೆ
ಗಾಳಿ ಹಾಕುತ್ತಲಿರುವ
ನಿರಂತರ ತಿದಿಗಳು

ಸದಾ ಕಿವಿಯೊಳಗೆ ಮೊರೆವ
ಮರೆಯಲು ಎಣಿಸಿದ
ಹಳೆಯ ಹಾಡುಗಳು

ಮುಂಜಾನೆಗೆ ಮುಸ್ಸಂಜೆಗೆ
ಎದೆಯ ಬಯಲಿನಲಿ ತಪ್ಪದೆ
ಊಳಿಡುವ ಗುಳ್ಳೆ ನರಿಗಳು

(ಚಿತ್ರಸೆಲೆ: scientificamerican.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: