ಕವಿತೆ: ಬೇವಿನ ಮರಕ್ಕೆ ಬೆಲ್ಲದ ನೀರೆರದರೆ

– .

ಕ್ಶೀರವ ಕುಡಿವ ಉರಗವು ವಿಶ ಕಾರುವುದ ಬಿಡುವುದೇ ಗೆಳೆಯ
ಮರವ ಕಡಿವ ಕೊಡಲಿಯ ಕಾವಿಗೆ ನಂಟು ಕಾಡುವುದೇ ಗೆಳೆಯ

ಮಂಜಿನ ಹನಿಗಳು ಬಾಳೆಲೆಯ ಮೇಲೆ ಶಾಶ್ವತವಿರುವುದೇ ಗೆಳೆಯ
ನಂಜಿನ ನರರು ಓಡಾಡುವ ದಾರಿಯಲ್ಲಿ ಗರಿಕೆ ಬೆಳೆಯುವುದೇ ಗೆಳೆಯ

ಕಳೆದುಕೊಂಡ ಮದುರ ಕ್ಶಣಗಳು ಮರಳಿ ಬರುವುದೇ ಗೆಳೆಯ
ಒಡೆದು ಹೋದ ಮನಸುಗಳು ಮತ್ತೆ ಒಂದಾಗುವುದೇ ಗೆಳೆಯ

ದೈರ‍್ಯದ ಬೆಳಕಿನ ಮುಂದೆ ಬಯದ ಕತ್ತಲು ನಿಲ್ಲುವುದೇ ಗೆಳೆಯ
ದರ‍್ಮದೆದುರು ಅದರ‍್ಮದ ಪಡೆಯು ಗೆಲ್ಲುವುದೇ ಗೆಳೆಯ

ಬೇವಿನ ಮರಕ್ಕೆ ಬೆಲ್ಲದ ನೀರೆರದರೆ ಎಲೆ ಸಿಹಿಯಾಗುವುದೇ ಗೆಳೆಯ
ಶಿವನ ನಂಬದ ಮೂಡರ ಬಾಳು ಹಸನಾಗುವುದೇ ಗೆಳೆಯ

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *