ಕಿರುಗವಿತೆಗಳು

ಗೀತಾ ಜಿ ಹೆಗಡೆ.

ನಿನ್ನ ಒಂದು
ನಗುವಿನಲ್ಲಿ
ನನ್ನದೊಂದು
ಕುಶಿಯಿದೆ
ನಿನ್ನೊಂದಿಗೆ
ಬದುಕಿಬಿಡಲು
ಮನಸು
ಶರಾ ಬರೆದಿದೆ.

**********

ಸೋತು ಹೋದ
ಬದುಕಿಂದು
ಮತ್ತೆ ಚಿಗುರೊಡೆದಿದೆ
ನಿನ್ನ ಪಾದದ
ಗುರುತೇ ಇದಕೆ
ಮೂಲ
ಕಾರಣವಾಗಿದೆ.

*********

ಬೆಚ್ಚಿ ಬೀಳಿಸುವ
ಸಂಗತಿ ತಿಳಿದು
ಕೊಂಚ
ಮೈ ನಡುಗಿದೆ
ನೀನು
ಬಂದರೇನೇ
ಅದಕೆ ದೈರ‍್ಯ
ಬರುವುದೆಂದಿದೆ.

**********

ರಿಂಗಣಿಸುವ
ಪದಗಳೆಲ್ಲ
ಜೋತು ಬಿದ್ದಿವೆ
ಕೊರಳಿಗೆ
ಒಡವೆ
ಇಲ್ಲದಿದ್ದರೇನಂತೆ
ಹಾರ ಮಾಡಿಕೋ
ನನ್ನೇ ಎಂದಿವೆ.

(ಚಿತ್ರ ಸೆಲೆ: pxhere.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: